ಗೌರಿಬಿದನೂರು: ರೈತರು ಕೃಷಿ ಪದ್ದತಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ತಳಿಯ ಬೀಜವನ್ನು ಬಳಸಿ ಗುಣಮಟ್ಟದ ಬೆಳೆಯನ್ನು ಪಡೆಯಬೇಕಾಗಿದೆ ಎಂದು ಉಪಕೃಷಿ ನಿರ್ದೇಶಕರಾದ ಎಂ. ಅನುರೂಪ ತಿಳಿಸಿದರು.
ತಾಲೂಕಿನ ಎಚ್. ನಾಗಸಂದ್ರದಲ್ಲಿ ಪ್ರಗತಿಪರ ರೈತ ವೆಂಕಟೇಶ್ ರವರ ಜಮೀನಿನಲ್ಲಿ ಕೃಷಿ ಇಲಾಖೆ ವತಿಯಿಂದ ಭೂ ಸಂಮೃದ್ಧಿ ಯೋಜನೆಯಡಿಯಲ್ಲಿ ಆಯೋಜಿಸಿದ್ದ ಶೇಂಗಾ ಬೆಳೆಯ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಪ್ರತಿಯೊಂದು ಬೆಳೆಯನ್ನೂ ತಾಂತ್ರಿಕತೆಯ ಮೂಲಕ ಅನುಸರಿಸಬೇಕಾಗುತ್ತದೆ. ಇದರಿಂದ ಕೃಷಿಯಲ್ಲಿ ಬದಲಾವಣೆಯ ಜೊತೆಗೆ ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಇಳುವರಿಯನ್ನು ಪಡೆಯಲು ಸಹಕಾರಿಯಾಗುತ್ತದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಬೇಕಾಗಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಎನ್. ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಸಾಮಾನ್ಯ ಬೆಳೆಗಳನ್ನು ಹೊರತುಪಡಿಸಿ ಸಿರಿಧಾನ್ಯಗಳ ಹಾಗೂ ಎಣ್ಣೆಕಾಳು ಬೆಳೆಲೆಗಳನ್ನು ಬೆಳೆಯುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕಾಗಿದೆ. ಇದರಿಂದ ಭೂಮಿಯ ಫಲವತ್ತತೆಯನ್ನು ಕಾಪಾಡುವ ಜೊತೆಗೆ ಉತ್ತಮ ಇಳುವರಿಯ ಬೆಳೆ ತೆಗೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಎಲ್ಲರೂ ಸಾವಯವ ಪದ್ದತಿಯ ಬೆಳೆಯನ್ನು ಬೆಳೆಯಬೇಕಾಗಿದೆ ಎಂದು ಹೇಳಿದರು.
Get In Touch With Us info@kalpa.news Whatsapp: 9481252093, 94487 22200
Discussion about this post