ಕಲ್ಪ ಮೀಡಿಯಾ ಹೌಸ್ | ಗೌರಿಬಿದನೂರು |
ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್.ಹರೀಶ್ ತಿಳಿಸಿದರು.
ತೊಂಡೇಬಾವಿ ಹೋಬಳಿಯ ಕಲ್ಲಿನಾಯಕನಹಳ್ಳಿ ಗ್ರಾಮದ ಬಳಿ ಇರುವ ಕಾರ್ಟೈವಾ ಸೀಡ್ ಕಂಪನಿಯ ಆವರಣದಲ್ಲಿ ಸೋಮವಾರ ಗೌರಿಬಿದನೂರು ವಿಧಾನಸಭಾ ಮತಕ್ಷೇತ್ರದ 139 ಮತಗಟ್ಟೆ ವ್ಯಾಪ್ತಿಯಲ್ಲಿ ಚುನಾವಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಯೋಜನೆ ಮಾಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರತಿಜ್ಞಾವಿಧಿಯನ್ನು ಬೋಧಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Also read: ಚೆಕ್ ಪೋಸ್ಟ್ ವಾಹನ ತಪಾಸಣೆ: 20ಲಕ್ಷಕ್ಕೂ ಹೆಚ್ಚು ಮೌಲ್ಯದ ಬಟ್ಟೆ, ದಿನಸಿ ಸಾಮಾನುಗಳು ವಶಕ್ಕೆ
ಪ್ರತೀ ಮತಕ್ಷೇತ್ರದಿಂದ ಹದಿನೆಂಟು ವರ್ಷ ಮೇಲ್ಪಟ್ಟವರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬೇಕು. 80 ವರ್ಷ ಮೆಲ್ಪಟ್ಟವರಿಗೆ ಅಧಿಕಾರಿಗಳು ಮನೆ ಬಳಿಗೆ ತೆರಳಿ ಮತವನ್ನು ಪಡೆಯುವ ನೂತನ ವಿಧಾನವನ್ನು ಈ ಬಾರಿ ಮೊಟ್ಟ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿದೆ. ಆದ್ದರಿಂದ ನಾವೆಲ್ಲರೂ ಹೆಚ್ಚಿನ ಶ್ರಮ ವಹಿಸಿ ಮತದಾರರಿಗೆ ಮತದಾನ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಬಹಳಷ್ಟು ಶ್ರಮವಹಿಸಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಹಾಕುವದು ನಮ್ಮ ನಿಮ್ಮೆಲ್ಲರ ಹಕ್ಕಾಗಿದೆ. ಪ್ರತೀ ಮತಗಟ್ಟೆಯಲ್ಲಿ ಶೇಕಡಾವಾರು ಮತದಾನವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.











Discussion about this post