ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಮಹೋನ್ನತ ನಟ ದಿವಂಗತ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು ಹರಿಪಾದ ಸೇರಿ 9 ವರ್ಷ ಕಳೆದಿದ್ದರೂ, ಇಂದಿಗೂ ಸಹ ಅವರ ಸ್ಮಾರಕ ನಿರ್ಮಾಣ ಕಾರ್ಯ ಆಗದೇ ಇರುವುದಕ್ಕೆ ಶಾಸಕ ಬಿ.ಸಿ. ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಇಷ್ಟು ವರ್ಷಗಳಾದರೂ ಹಿರಿಯ ನಟರೊಬ್ಬರ ಸ್ಮಾರಕ ನಿರ್ಮಾಣ ಮಾಡಿಲ್ಲ. ಈಗಲಾದರೂ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ.
ದಿ// ಸಾಹಸಸಿಂಹ ವಿಷ್ಣುವರ್ಧನ್ ಅವರ
ಸ್ಮಾರಕಕ್ಕು ಸರ್ಕಾರ ಕೂಡಲೇ ಆಸಕ್ತಿ ವಹಿಸಿ ಸ್ಮಾರಕವನ್ನು ನಿರ್ಮಿಸಬೇಕು.ಜಾಗದ ಸಮಸ್ಯೆಯಿದ್ದರೆ ಅವರ ಕುಟುಂಬವನ್ನು ಕೇಳಿ ಸ್ಮಾರಕವನ್ನು ನಿರ್ಮಿಸಿ. ವಿಷ್ಣು ಅವರ ಆತ್ಮಕ್ಕೆ ಶಾಂತಿಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ. @CMofKarnataka @DrParameshwara @DrVishnuDadaFc— Kourava B.C.Patil (@kourvabcpatil) November 27, 2018
ಜಾಗದ ಸಮಸ್ಯೆಯಿದ್ದರೆ ಅವರ ಕುಟುಂಬದೊಂದಿಗೆ ಚರ್ಚಿಸಿ, ಸ್ಮಾರಕ ನಿರ್ಮಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ನೀಡಬೇಕು. ಈ ಕುರಿತಂತೆ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ತತಕ್ಷಣ ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
Discussion about this post