ಶಿವಮೊಗ್ಗ: ಗುರು ಪೂರ್ಣಿಮೆ ಅಂಗವಾಗಿ ಜುಲೈ 27ರ ನಾಳೆ ದೇಶದ 109 ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಓಟಿ ರಸ್ತೆಯ ಸೀತಮ್ಮ ಅನಂತಯ್ಯ ಸಭಾಭವನದಲ್ಲಿ ಸಂಜೆ 5.30 ಗಂಟೆಗೆ, ಶಿಕಾರಿಪುರದ ತರಳಬಾಳು ಸಮುದಾಯ ಭವನದಲ್ಲಿ ಸಂಜೆ 5.00 ಗಂಟೆಗೆ ಹಾಗೂ ನ್ಯಾಮತಿಯ ಮಾಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಸಂಜೆ 5.00 ಗಂಟೆಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಹಿಂದೂಗಳ ಲಕ್ಷಗಟ್ಟಲೇ ವರ್ಷಗಳ ಸಂಸ್ಕೃತಿಯಲ್ಲಿನ ಅದ್ವಿತೀಯ ಪರಂಪರೆ ಅಂದರೆ ಗುರು-ಶಿಷ್ಯ ಪರಂಪರೆ! ರಾಷ್ಟ್ರ ಮತ್ತು ಧರ್ಮವು ಸಂಕಟದಲ್ಲಿರುವಾಗ ಸುವ್ಯವಸ್ಥೆಯನ್ನು ನಿರ್ಮಾಣ ಮಾಡುವಂತಹ ಮಹಾನ ಕಾರ್ಯವನ್ನು ಗುರು-ಶಿಷ್ಯರು ಮಾಡಿದಂತಹ ಗೌರವಶಾಲಿ ಇತಿಹಾಸವು ಭಾರತಕ್ಕೆ ಲಭಿಸಿದೆ.
ಭಗವಾನ್ ಶ್ರೀಕೃಷ್ಣನು ಅರ್ಜುನನಿಂದ, ಆರ್ಯ ಚಾಣಕ್ಯರು ಸಾವ್ರಾಟ್ ಚಂದ್ರಗುಪ್ತನಿಂದ ಮತ್ತು ಸಮರ್ಥ ರಾಮದಾಸ ಸ್ವಾಮಿಯವರು ಛತ್ರಪತಿ ಶಿವಾಜಿ ಮಹಾರಾಜರ ಮಾಧ್ಯಮದಿಂದ ಆಗಿನ ಸಾಮಾಜಿಕ ಪಿಡುಗುಗಳ ನಿರ್ಮೂಲನೆಯನ್ನು ಮಾಡಿದರು ಹಾಗೂ ಆದರ್ಶ ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದರು. ಈ ಪರಂಪರೆಯ ಬಗ್ಗೆ ಗುರುಪೂರ್ಣಿಮೆಯ ದಿನ ಕೃತಜ್ಞತೆಯನ್ನು ವ್ಯಕ್ತಪಡಿಸುವುದು, ಅನಾದಿ ಕಾಲದಿಂದ ನಡೆಯುತ್ತಾ ಬಂದಿದೆ. ಈ ಪರಂಪರೆಯ ಜೋಪಾಸನೆ ಹಾಗೂ ಸಂವರ್ಧನೆಯನ್ನು ಮಾಡುವ ಉದ್ದೇಶದಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಇತರ ಸಮವಿಚಾರಿ ಸಂಘಟನೆಯೊಂದಿಗೆ ದೇಶದಾದ್ಯಂತ 109 ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ’ದ ಆಯೋಜನೆಯನ್ನು ಮಾಡಲಾಗಿದೆ, ಎಂದು ಸನಾತನ ಸಂಸ್ಥೆ ತಿಳಿಸಿದೆ.
ಈ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಗುರುಪೂಜೆ; ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಸಂಘಟನೆಯ ಅದ್ವಿತೀಯ ಕಾರ್ಯ’ ಈ ವಿಷಯದ ಬಗ್ಗೆ ಸಾಕ್ಷ್ಯಚಿತ್ರ; ಸಮಾಜ, ರಾಷ್ಟ್ರ ಮತ್ತು ಧರ್ಮದ ಬಗ್ಗೆ ಕೃತಿಶೀಲರಾಗಿರುವ ಗಣ್ಯರ ವಿಚಾರ, ಅದೇ ರೀತಿ ಧರ್ಮರಹಿತ ಪ್ರಜಾಪ್ರಭುತ್ವ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ’ ಈ ವಿಷಯದಲ್ಲೂ ಮಾರ್ಗದರ್ಶನವಾಗಲಿದೆ. ಈ ಮಹೋತ್ಸವದಲ್ಲಿ ಆಪತ್ಕಾಲದಲ್ಲಿ ಸಮಾಜ ಸಹಾಯಕ್ಕಾಗಿ ಆವಶ್ಯಕವಿರುವ ಪ್ರಥಮಚಿಕಿತ್ಸೆ ತರಬೇತಿ ಮತ್ತು ಸ್ವರಕ್ಷಣೆ ಮತ್ತು ಹೋರಾಡುವುದನ್ನು ಕಲಿಸುವಂತಹ ಸ್ವಸಂರಕ್ಷಣೆಯ ಪ್ರಾತ್ಯಕ್ಷಿಕೆಯು ಈ ಕಾರ್ಯಕ್ರಮದ ವಿಶೇಷವಾದ ಆಕರ್ಷಣೆಯಾಗಿದೆ.
Discussion about this post