ಕಲ್ಪ ಮೀಡಿಯಾ ಹೌಸ್ | ಗುರುಗ್ರಾಮ |
ಪೊಲೀಸ್ ವಾಹನವೊಂದು ಕಾರಿಗೆ ಡಿಕ್ಕಿಯಾದ ಪರಿಣಾಮ 6 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.
Haryana | Infant killed, several injured after a police vehicle collided with a car in Gurugram
The accident happened on Gurugram-Faridabad Road. ERV vehicle of police was coming from the wrong side. Case registered against the ERV driver: Vikas Kaushik, ACP, DLF Gurugram (15.1) pic.twitter.com/nB6WHvy1G6
— ANI (@ANI) January 16, 2023
ಗುರುಗ್ರಾಮ-ಫರೀದಾಬಾದ್ ರಸ್ತೆಯಲ್ಲಿ ವೇಗವಾಗಿ ಬಂದ ಹರ್ಯಾಣ ಪೊಲೀಸರ Hariyana Police ತುರ್ತು ಪ್ರತಿಕ್ರಿಯೆ ವಾಹನ ಘಟನೆ ನಡೆದಿದ್ದು, ಡಿಕ್ಕಿ ಹೊಡೆದ ಪೊಲೀಸರು ಮಾನವೀಯತೆಯಿಂದ ರಕ್ಷಣೆ ಮಾಡದೇ ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಮತ್ತೆ ಐವರು ಗಾಯಗೊಂಡಿದ್ದು, ಘಟನೆ ಬಳಿಕ ವಾಹನದಲ್ಲಿದ್ದ ಪೊಲೀಸರು ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
Also read: ಸಂಕ್ರಾಂತಿ ಹೋರಿ ಬೆದರಿಸುವ ಹಬ್ಬ: ಶಿವಮೊಗ್ಗದಲ್ಲಿ ಇಬ್ಬರ ಸಾವು, ಮಂಡ್ಯದಲ್ಲಿ ಓರ್ವ ಗಂಭೀರ
ಮೃತದೇಹವನ್ನು ವಾಹನದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279, 337, 427, 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post