ಕಲ್ಪ ಮೀಡಿಯಾ ಹೌಸ್ | ಗುರುಗ್ರಾಮ |
ನಾಯಿಯೊಂದು ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೇಟೆಡ್ ಹೌಸಿಂಗ್ ಸೊಸೈಟಿಯ ನಿರ್ವಹಣೆ ಮತ್ತು ಅದರ ಭದ್ರತಾ ಏಜೆನ್ಸಿಗೆ 4 ಲಕ್ಷ ರೂ. ದಂಡವನ್ನು ಜಿಲ್ಲಾ ಗ್ರಾಹಕರ ವೇದಿಕೆ ವಿಧಿಸಿದೆ.
ಗುರುಗ್ರಾಮ ನಿವಾಸಿಯಾದ ಪಂಕಜ್ ಅಗರ್ವಾಲ್ ಅವರು ಕುಟುಂಬದೊಂದಿಗೆ ಅಪಾರ್ಟ್‌ಮೆಂಟ್ ಒಂದರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್’ನಲ್ಲಿ ಪಂಕಜ್ ಅಗರ್ವಾಲ್ ಅವರ ಮಗಳಿಗೆ ಅಪಾರ್ಟ್‌ಮೆಂಟ್’ನಲ್ಲಿದ್ದ ನಾಯಿಯೊಂದು ಕಚ್ಚಿದೆ. ಈ ಹಿನ್ನೆಲೆ ಗೇಟೆಡ್ ಹೌಸಿಂಗ್ ಸೊಸೈಟಿಯ ನಿರ್ವಹಣೆ ಮತ್ತು ಅದರ ಭದ್ರತೆ ಸರಿಯಿಲ್ಲ ಎಂದು ಅವರು ಗ್ರಾಹಕರ ವೇದಿಕೆಗೆ ದೂರು ಕೊಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ವೇದಿಕೆ 4 ಲಕ್ಷ ರೂ. ದಂಡ ವಿಧಿಸಿದೆ.
ಗ್ರಾಹಕರ ವೇದಿಕೆಯಲ್ಲಿ ನಡೆದ ವಿಚಾರಣೆಯ ವೇಳೆ, ಘಟನೆಯಲ್ಲಿ ಆರು ಮಂದಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. ವಿಚಾರಣೆಯ ನಂತರ, ಸಂಜೀವ್ ಜಿಂದಾಲ್ ಅವರ ನ್ಯಾಯಾಲಯವು, ಸುರಕ್ಷತೆಯ ಲೋಪದಿಂದ ಮ್ಯಾಗ್ನೋಲಿಯಾಸ್ ಮ್ಯಾನೇಜ್ಮೆಂಟ್ ಮತ್ತು ಸೆಕ್ಯುರಿಟಿ ಏಜೆನ್ಸಿಗೆ ದಂಡ ವಿಧಿಸಲಾಯಿತು. ಈ ಘಟನೆ ಮಗು ಮತ್ತು ಅವಳ ಕುಟುಂಬಕ್ಕೆ ಮಾನಸಿಕ ಸಂಕಟವನ್ನು ಉಂಟುಮಾಡಿತು ಎಂದು ಗ್ರಾಹಕ ವೇದಿಕೆ ತಿಳಿಸಿದೆ.
Also read: ಮಳೆಯಿಂದಾಗಿ ಬೆಂಗಳೂರಿನಲ್ಲಿ ಎಷ್ಟು ಮನೆ ಹಾನಿಯಾಗಿದೆ? ಪರಿಹಾರದ ಕಥೆಯೇನು? ಇಲ್ಲಿದೆ ಮಾಹಿತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post