ಕಲ್ಪ ಮೀಡಿಯಾ ಹೌಸ್ | ಹಲ್ದ್ವಾನಿ |
ಉತ್ತರ ಪ್ರದೇಶದ ಹಲ್ದ್ವಾನಿಯಲ್ಲಿ ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಠಿಸಿ ಅಪಾರ ನಷ್ಟಕ್ಕೆ ಕಾರಣವಾದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್’ಗೆ Haldwani Riots master mind Abdul Malik ಸೇರಿದ ಅದ್ದೂರಿ ಬಂಗಲೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಮುಖವಾಗಿ ಅಬ್ದುಲ್ ಮಲಿಕ್ ಹಾಗೂ ಅವನ ಪುತ್ರ ಅಬ್ದುಲ್ ಮೊಯೀದ್’ಗೆ ಸೇರಿದ ಬೇರೆ ಬೇರೆ ಆಸ್ತಿ ಹಾಗೂ ಬಂಗಲೆಗಳಿಗೆ ಉತ್ತರಾಖಂಡ್ ಪೊಲೀಸರು ಪೋಸ್ಟರ್’ಗಳನ್ನು ಅಂಟಿಸಿದ್ದಾರೆ.
ಇನ್ನು, ಗಲಭೆ ಸೃಷ್ಠಿಸುವಲ್ಲಿ ಪಾತ್ರ ವಹಿಸಿದ ಹಾಗೂ ಪಾಲ್ಗೊಂಡ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದಕ್ಕಾಗಿ ಉತ್ತರಾಖಂಡ್ ರಾಜ್ಯದಾದ್ಯಂತ ಪೊಲೀಸರು ಪೋಸ್ಟರ್ ಅಳವಡಿಸಿದ್ದು, ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Also read: ಗ್ಯಾರಂಟಿಗಳ ನಡುವೆ ರೈತರನ್ನ ಮರೆತ ಸರ್ಕಾರ: ಬಂಡೆಪ್ಪ ಖಾಶೆಂಪುರ್ ಬೇಸರ
ಘಟನೆಗೆ ಸಂಬಂಧಿಸಿದಂತೆ ಕಲ್ಲು ತೂರಾಟ, ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 42 ಗಲಭೆಕೋರರನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post