ಕಲ್ಪ ಮೀಡಿಯಾ ಹೌಸ್ | ಹರಿದ್ವಾರ |
ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ ಬಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ.
ಉತ್ತರಾಖಂಡದ ಹರಿದ್ವಾರ ಹಿಲ್ಲೆಯಲ್ಲಿ ಘಟನೆ ನಡೆದಿದ್ದು, ಮೃತರನ್ನು ಸಿದ್ದಾರ್ಥ್ ಸೈನಿ(19) ಹಾಗೂ ಶಿವಂ(16) ಎಂದು ಗುರುತಿಸಲಾಗಿದೆ.
ಮೃತರ ಕುಟುಂಬಸ್ಥರು ಸೋಲಾನಿ ನದಿಯ ಬಳಿ ಪೂಜೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ರೈಲ್ವೆ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಡೆಹ್ರಾಡೂನ್-ದೆಹಲಿ ಎಕ್ಸ್’ಪ್ರೆಸ್ ರೈಲನ್ನು ಯುವಕರು ಗಮನಿಸಿಲ್ಲ. ಇದನ್ನು ಗಮನಿಸದೇ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದ ಇಬ್ಬರಿಗೂ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರೂ ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿದ್ದಾರೆ.
Also read: ಶ್ರೀನಗರ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕ ಸಾವು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post