ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹರಿಹರ: ಯಮಲೋಕದ ಮಹಾರಾಜರು ಭೂ ಲೋಕದ ಕಡೆ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣದ ಮಧ್ಯೆ ಯಮ ರಾಜರಿಗೆ ಬೆಳ್ಳೂಡಿ ರಾಮತೀರ್ಥ ಮಧ್ಯೆ ಇರುವ ಸೇತುವೆಯೂ ಅತ್ಯಾಕರ್ಷಕವಾಗಿ ಕಂಡಿದೆ. ಸೇತುವೆಯ ಆಕರ್ಷಣೆಗೆ ಮನಸೋತು ಯಮ ಮಹಾರಾಜರು ಹಾಗೂ ಚಿತ್ರಗುಪ್ತ ಎಡಬದಿಯಲ್ಲಿ ಕುಳಿತುಕೊಂಡು ವಾಹನ ಸವಾರರನ್ನು ಕೈಬೀಸಿ ಕರೆಯುತ್ತಿದ್ದಾರೆ. ಈ ಮಾರ್ಗದಲ್ಲಿ ಸಾಗುವ ವಾಹನ ಸವಾರರು ಯಮಲೋಕದ ಯಮ ರಾಜರನ್ನು ಚಿತ್ರಗುಪ್ತನನ್ನು ಕಂಡು ಅವರ ಲೋಕಕ್ಕೆ ಒಮ್ಮೆ ಹೋಗುವ ಆಸೆಯನ್ನು ವ್ಯಕ್ತಪಡಿಸಿದಂತೆ ಇದೆ ಈ ಸೇತುವೆ.
ವಾಹನ ಸವಾರರನ್ನು ಯಮಲೋಕಕ್ಕೆ ಕರೆದುಕೊಂಡು ಹೋಗಲು ಕೈ ಮಾಡಿ ಕರೆಯುತ್ತಿದ್ದಾರೆ. ಹರಿಹರ ತಾಲ್ಲೂಕಿನ ಬೆಳ್ಳೊಡಿ ಮಾರ್ಗದ ರಾಮನ ತೀರ್ಥಕ್ಕೆ ಹೋಗುವ ರಸ್ತೆಯ ಮಧ್ಯೆ ಇರುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆ.
ಹರಿಹರ ತಾಲ್ಲೂಕು ಬೆಳ್ಳೂಡಿ ರಾಮನ ತೀರ್ಥಕ್ಕೆ ಹೋಗುವ ರಸ್ತೆ ಮಧ್ಯದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಜನರ ಹಾಗೂ ವಾಹನ ಸವಾರರ ಅನುಕೂಲಕ್ಕಾಗಿ ಸೇತುವೆ ಒಂದನ್ನು ನಿರ್ಮಾಣ ಮಾಡಲಾಗಿದೆ.
ಕಳೆದ ವರ್ಷ ಸುರಿದ ಭಾರಿ ಮಳೆಗೆ ಈ ಸೇತುವೆಯು ಕೊಚ್ಚಿಕೊಂಡು ಹೋಗಿತ್ತು ಆ ಸಂದರ್ಭದಲ್ಲಿ ಜಿಲ್ಲೆಗೆ ನೂತನವಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಮಳೆಗಾಲ ಮುಗಿದ ಕೇವಲ ಒಂದೇ ತಿಂಗಳಲ್ಲಿ ಈ ಸೇತುವೆ ದುರಸ್ತಿಯನ್ನು ಸರಿಪಡಿಸಿ ಜನರಿಗೆ ಹಾಗೂ ಶಾಲಾ ಮಕ್ಕಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.
ಆದರೆ ಜಿಲ್ಲಾಧಿಕಾರಿಗಳಾಗಲಿ, ತಾಲೂಕು ದಂಡಾಧಿಕಾರಿಗಳಾಗಲಿ ಸೇತುವೆಯ ಎಡ ಬಲ ಬದಿಯಲ್ಲಿ ತಡೆಗೋಡೆ ಇಲ್ಲದ್ದನ್ನು ಗಮನಿಸಿದ್ದಾರೆ ಅಥವಾ ಇಲ್ಲವೇ ಎಂಬುದು ಒಂದು ತಿಳಿಯುತ್ತಿಲ್ಲ. ಕಾರಣ ಈ ಸೇತುವೆಯ ಎಡ ಹಾಗೂ ಬಲ ಭಾಗದಲ್ಲಿ ಯಾವುದೇ ತಡೆಗೋಡೆ ಇಲ್ಲದ ಕಾರಣ ವಾಹನ ಸವಾರರು ಪಾದಚಾರಿಗಳು ರಾತ್ರಿಯ ಸಮಯದಲ್ಲಿ ಅಪಾಯಕ್ಕೆ ಸಿಲುಕುವ ಸಂಭವವೇ ಹೆಚ್ಚಾಗಿದೆ. ಈ ರಸ್ತೆಯ ಮಾರ್ಗದಲ್ಲಿ ಶಾಲಾ ವಿದ್ಯಾರ್ಥಿಗಳು ಓಡಾಡುತ್ತಿದ್ದು ಮುಂದೆ ಏನಾದರೂ ಅನಾಹುತ ಆದರೆ ಜವಾಬ್ದಾರರು ಯಾರು? ಜನರ ಜೀವಕ್ಕೆ ಬೆಲೆ ಇಲ್ಲವೇ? ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂಬ ನೂರಾರು ಪ್ರಶ್ನೆಗಳು? ಉದ್ಭವಿಸುತ್ತವೆ.
ಮುಂದೆ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಅನಾಹುತ ಆಗುವ ಮೊದಲೇ ಎಚ್ಚೆತ್ತುಕೊಂಡು ಈ ಸೇತುವೆಯ ಎಡ ಮತ್ತು ಬಲ ಭಾಗದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಿ ಭಾರಿ ಅನಾಹುತವನ್ನು ತಪ್ಪಿಸಲಿ ಎಂಬುದು ನಮ್ಮ ಮಾಧ್ಯಮದ ಕಳಕಳಿಯಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸೇತುವೆಯ ಎಡ ಬಲ ಬದಿಯಲ್ಲಿ ತಡೆಗೋಡೆಯನ್ನು ನಿರ್ಮಿಸಲು ಮುಂದಾಗುತ್ತಾರೋ ಕಾದು ನೋಡಬೇಕಾಗಿದೆ.
ವರದಿ: ಪ್ರಕಾಶ್ ಮಂದಾರ
Get in Touch With Us info@kalpa.news Whatsapp: 9481252093
Discussion about this post