ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಾಸನ: ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣದಿಂದ ಬಾರ್’ವೊಂದಕ್ಕೆ ನುಗ್ಗಿದ್ದ ಕಳ್ಳನೊಬ್ಬ, ಅಲ್ಲೇ ಕಂಠಪೂರ್ತಿ ಕುಡಿದು ಬಿದ್ದು, ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಸಂತೆಪೇಟೆಯ ಪ್ರಿಯದರ್ಶಿನಿ ಬಾರ್’ನಲ್ಲಿ ಘಟನೆ ನಡೆದಿದ್ದು, ಬಾರ್‌ನ ಹೆಂಚು ತೆಗೆದು ಒಳ ಸೇರಿಕೊಂಡಿದ್ದ ಕುಡುಕ ಬಾರ್ ಒಳಗೇ ಕಂಠ ಪೂರ್ತಿ ಕುಡಿದು ಒಳಗೆ ನಿದ್ದೆ ಮಾಡಿದ್ದ. ಸುಮಾರು ಎರಡು ಬಾಕ್ಸ್ ಮದ್ಯವನ್ನು ಕದ್ದೊಯ್ಯಲು ಕಳ್ಳ ಯೋಚಿಸಿದ್ದು, ಕುಡಿದ ಮತ್ತು ಹೆಚ್ಚಾಗಿ ಬಾಕ್ಸ್ ಹೊರಲಾರದೇ ಅಲ್ಲಿದೇ ಮಲಗಿದ್ದ.
ಹಾಸನದ ವಲ್ಲಭಾಯಿ ರಸ್ತೆಯ ರೌಡಿ ಶೀಟರ್ ರೋಹಿತ್ ಅಲಿಯಾಸ್ ಕೋಕಿ ಬಂಧಿತ ಆರೋಪಿ. ಕುಡಿದ ಅಮಲಿನಲ್ಲಿ ನಿದ್ರೆಗೆ ಜಾರಿ ಸಿಕ್ಕಿ ಬಿದ್ದ ಮದ್ಯ ಕಳ್ಳನನ್ನು ಪೆನ್ಷನ್ ಮೊಹಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Get in Touch With Us info@kalpa.news Whatsapp: 9481252093














