ಕಲ್ಪ ಮೀಡಿಯಾ ಹೌಸ್ | ಬೇಲೂರು |
ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ, ‘ವಿಕಾಸ’ ಸಂಘಟನೆಯಿಂದ ಅದ್ದೂರಿ ‘ ಬೇಲೂರು ಹಬ್ಬ ‘ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಸ್ಕಾರ, ಸಂಸ್ಕೃತಿ, ಸಂಘಟನೆಯ ಆಶಯಗಳೊಂದಿಗೆ ಯಶಸ್ವಿಯಾಗಿ ಎಂಟು ವರ್ಷಗಳಿಂದ ಕಾರ್ಯರೂಪಿಸುತ್ತಿರವ ವಿಕಾಸ ಸಂಘಟನೆ, ಬ್ರಾಹ್ಮಣ ಪತ್ರಕರ್ತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಉದಯೋನ್ಮುಖ ಮಾಧ್ಯಮ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ,ಪುಸ್ತಕ ಬಿಡುಗಡೆ, ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ, ಕುಟುಂಬ ಮಿಲನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ‘ಬೇಲೂರ ಹಬ್ಬ-2025’ ರಲ್ಲಿ ಮೆಳೈಸಲಾಗಿದೆ.
ಸಮಾರಂಭವು 20 ರಂದು ಹಾಸನ ಜಿಲ್ಲೆಯ ಬೇಲೂರಿನ ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ಭಾರತೀತೀರ್ಥ ಸಭಾಭವನದಲ್ಲಿ ಜರುಗಲಿದೆ ಎಂದು ವಿಕಾಸ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಹನುಮೇಶ ಕೆ. ಯಾವಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಘಾಟನೆ ಸಮಾರಂಭವು 9-30 ಕ್ಕೆ ನಡೆಯಲಿದ್ದು, ವಿಕಾಸ ಸಂಸ್ಥೆ ಯಿಂದ ಬ್ರಾಹ್ಮಣ ಪತ್ರಕರ್ತ ಮಕ್ಕಳಿಗೆ ನಗದು ಪ್ರತಿಭಾ ಪುರಸ್ಕಾರ ಹಾಗೂ ಅಗಲಿದ ಹಿರಿಯ ಪತ್ರಕರ್ತರ ಸ್ಮರಣಾರ್ಥ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಟ.ಎಸ್. ಶ್ರೀವತ್ಸ ನಡೆಸಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಅಸಗೋಡು ಜಯಸಿಂಹ ಅವರು ಭಾಗವಹಿಸಲಿದ್ದಾರೆ.
ವಿಪ್ರರಿಗಾಗಿ ನೂತನ ಡಿಜಿಟಲ್ ಮೀಡಿಯಾ ಉದ್ಗಾಟನೆಯು ಇದೇ ಸಂದರ್ಭದಲ್ಲಿ ಜರುಗಲಿದ್ದು, ಅಖಿಲ ಕರ್ನಾಟಕ ಬ್ರಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಖ್ಯಾತ ವೈದಿಕ ಜ್ಯೋತಿಷಿಗಳಾದ ಡಾ. ಪಂ.ಪ್ರಸನ್ನಾಚಾರ್ಯ ಎಸ್. ಕಟ್ಟಿ ಅವರು ಉದ್ಘಾಟಿಸಲಿದ್ದು, ನೊಬ್ಲಿಕ್ರೀಂ ಸಿ.ಇ.ಓ ಪ್ರಶಾಂತ ಹೆಬ್ಬಾರ ಉಪಸ್ಥಿತಿಯಲ್ಲಿ ಈ ಡಿಜಿಟಲ್ ಮೀಡಿಯಾ ಅನಾವರಣವಾಗಲಿದೆ. ವಿಶೇಷ ಅತಿಥಿಗಳಾಗಿ ಕನ್ನಡ ಪ್ರಭದ ಪ್ರಸರಣ ವಿಭಾಗದ ಮುಖ್ಯಸ್ಥ ಎಂ.ಎನ್.ಅನಂತಮೂರ್ತಿ, ಪ್ರತಿಬಿಂಬ ಟ್ರಸ್ಟ ನಾ ಅಧ್ಯಕ್ಷ ಮುರಳಿ ವಿ ರಾವ್ ಹಾಗೂ ಉದ್ಯಮಿ ಶ್ರೀಧರ ಅಯ್ಯಂಗಾರ್ ಭಾಗವಹಿಸಲಿದ್ದಾರೆ ಎಂದು ಹನುಮೇಶ್ ಕೆ ಯಾವಗಲ್ ತಿಳಿಸಿದ್ದಾರೆ.
ಹಾಸನ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಚ್.ಎಸ್.ಮಂಜುನಾಥ್ ಮೂರ್ತಿ, ಬೇಲೂರ ತಾಲೂಕಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಸಿ.ಆರ್.ವಿಜಯಕೇಶವ, ಬೇಲೂರು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಘುನಾಥ್ ಹಾಗೂ ಬೇಲೂರು ಶಂಕರ ಮಠದ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ಅವರಿಗೆ ಗೌರವ ಸನ್ಮಾನ ನಡೆಯಲಿದೆ.


ನಮ್ಮ ಹಿರಿಯರು – ನಮ್ಮ ಹೆಮ್ಮೆ ಮಾಲಿಕೆಯಲ್ಲಿ ಹಿರಿಯ ಮಾದ್ಯಮ ಸಾಧಕರಾದ ಹಿರಿಯೂರು ರಾಘವೇಂದ್ರ, ಎನ್.ವಿ.ರಮೇಶ, ಎಸ್.ಕೆ.ದತ್ತಾತ್ರಿ, ಟಿ.ಎಸ್.ಇಂದಿರಾ, ಹರೀಶ್, ಹಳೇಬೀಡು ರಾಮಪ್ರಸಾದ್, ಬಾಬು ಜಿ.ಎಸ್, ರಾಘವೇಂದ್ರ ಹೊಳ್ಳ ಹಾಗೂ ಬೇಲೂರು ಕೃಷ್ಣಮೂರ್ತಿ ಅವರುಗಳಿಗೆ ಸನ್ಮಾನಿಸಲಾಗುವದು ಎಂದು ಹನುಮೇಶ್ ಕೆ ಯಾವಗಲ್ ವಿವರಿಸಿದ್ದಾರೆ.
ಕಾರ್ಯಕ್ರಮ ಆರಂಭ ಪೂರ್ವ ಸ್ಪೂರ್ತಿ ಎಚ್. ಯಾವಗಲ್ ಕಥಕ್ ಪ್ರಾರ್ಥನಾ ನೃತ್ಯ ನಡೆಸಿಕೊಡಲಿದ್ದಾರೆ.
19 ರಂದು ವಿಕಾಸ ಸಂಘದಿಂದ ಬೆಂಗಳೂರಿನಿಂದ ಬಸ್ ಮೂಲಕ ವಿವಿಧ ಐತಿಹಾಸಿಕ ಕ್ಷೇತ್ರ ದರ್ಶನ ಮಾಡುತ್ತ ಬೇಲೂರಿಗೆ ತಲುಪಿ , ಅಲ್ಲಿ ವಿಕಾಸ ತಂಡ ವಾಸ್ತವ್ಯ ಮಾಡಲಿದೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post