ಕಲ್ಪ ಮೀಡಿಯಾ ಹೌಸ್ | ಹಾಸನ |
ಶ್ರೀ ಹಾಸನಾಂಬ ದೇವಿ ದರ್ಶನ #Shri Hasanamba Devi ಹಾಗೂ ಸಿದ್ದೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಅ.19 ರಂದು ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ #State Level Dog Show ಆಯೋಜಿಸಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹಾಸನ ವತಿಯಿಂದ ಸಾಲಗಾಮೆ ರಸ್ತೆ, ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಅ.19 ರಂದು ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಶ್ವಾನ ಪ್ರದರ್ಶನದಲ್ಲಿ ಎರಡು ತಿಂಗಳ ವಯಸ್ಸಿನ ಮೇಲ್ಪಟ್ಟ ಯಾವುದೇ ತಳಿಯ ಶ್ವಾನಗಳು ಭಾಗವಹಿಸಬಹುದಾಗಿದೆ.

ನೊಂದಣಿ ಉಚಿತವಾಗಿದ್ದು, ಅ.18ರ ಸಂಜೆ 5 ಗಂಟೆ ಒಳಗೆ ನೊಂದಣಿ ಮಾಡಿಸಿಕೊಳ್ಳಲು ಕೋರಿದೆ. ಪ್ರದರ್ಶನ ನಡೆಯುವ ಸ್ಥಳದಲ್ಲಿ ನೊಂದಣಿಗೆ ಅವಕಾಶವಿರುವುದಿಲ್ಲ. ಹಾಸನ ಜಿಲ್ಲೆಯ ನಿವಾಸಿಗಳಿಗೆ ನೊಂದಣಿಯನ್ನು ಸೀಮಿತಗೊಳಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post