ಕಲ್ಪ ಮೀಡಿಯಾ ಹೌಸ್ | ಹಾಸನ |
ಕೃಷಿ ಹೊಂಡಕ್ಕೆ ಬಿದ್ದ ಆಟಿಕೆ ರೈಲನ್ನು ತರಲು ನೀರಿಗೆ ಇಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕರನ್ನು ಗ್ರಾಮದ ಕೃಷ್ಣ ಎಂಬವರ ಪುತ್ರ ಪ್ರಣಯ್ (7) ಹಾಗೂ ಪ್ರಶಾಂತ್ ಎಂಬವರ ಪುತ್ರ ನಿಶಾಂತ್ ಎಂದು ಗುರುತಿಸಲಾಗಿದೆ.

ಮುಳುಗಿ ಸಾವನ್ನಪ್ಪಿದ್ದಾರೆ. ಬಹಳ ಸಮಯದವರೆಗೂ ಮಕ್ಕಳು ಕಾಣಿಸದೇ ಇದ್ದಾಗ, ಪೋಷಕರು ಹುಡುಕಾಟ ನಡೆಸಿದ್ದಾರೆ. ಆಗ ಕೃಷಿ ಹೊಂಡದ ಬಳಿ ಚಪ್ಪಲಿಗಳು ಪತ್ತೆಯಾಗಿವೆ. ಕೃಷಿ ಹೊಂಡದಲ್ಲಿ ಹುಡುಕಾಟ ನಡೆಸಿದಾಗ ಮಕ್ಕಳ ಶವ ಪತ್ತೆಯಾಗಿವೆ.

ಈ ಸಂಬಂಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    
 
	    	





 Loading ...
 Loading ... 
							



 
                
Discussion about this post