ಬೆಂಗಳೂರು: ಹಿಂದೆ ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಮುಖದಲ್ಲಿದ್ದ ಸಂತೋಷ, ನೆಮ್ಮದಿ ಹಾಗೂ ಉತ್ಸಾಹ ಅದೇಕೋ ಈಗ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿಯೂ ಸಿಎಂ ಆಗಿರುವ ಕುಮಾರಸ್ವಾಮಿ ಅವರ ಮುಖದಲ್ಲಿಲ್ಲ ಎನ್ನುವುದು ಸತ್ಯ.
ಅತಂತ್ರ ವಿಧಾನಸಭಾ ಫಲಿತಾಂಶದಲ್ಲಿ ನಡೆದ ರಾಜಕೀಯ ದೊಂಬರಾಟದಲ್ಲಿ ಅಕ್ರಮವಾಗಿ ಸೃಷ್ಠಿಯಾದ ಸಾಂದರ್ಭಿಕ ಶಿಶು ಎಂಬ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರ ಮಾತುಗಳು, ವರ್ತನೆಗಳು ಹಾಗೂ ಭಾವನೆಗಳನ್ನು ಹೊರ ಹಾಕುತ್ತಿರುವ ರೀತಿ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಹಾಗೂ ಸಾಂದರ್ಭಿಕ ಶಿಶುವಿನ ಆಯಸ್ಸು ಕ್ಷೀಣಿಸುತ್ತಿದೆಯೇ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ.
ನಿನ್ನೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗಿದ್ದೇನೆ, ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರಲ್ಲಿ ಸಂತೋಷವಿದೆ, ಆದರೆ ನಾನು ಸಂತೋಷವಾಗಿಲ್ಲ ಎಂದಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ.
#WATCH: Karnataka CM HD Kumaraswamy breaks down at an event in Bengaluru; says 'You are standing with bouquets to wish me, as one of your brother became CM & you all are happy, but I'm not. I know the pain of coalition govt. I became Vishkanth&swallowed pain of this govt' (14.07) pic.twitter.com/cQ8f90KkFT
— ANI (@ANI) July 15, 2018
ನಾನು ಮೆರೆಯಬೇಕೆಂದು ಸಿಎಂ ಆಗಿಲ್ಲ, ನಾನು ಹೋದಕಡೆ ಜನ ಸೇರ್ತಾರೆ, ಸಂತೋಷ ಪಡ್ತಾರೆ. ಆದರೆ ಜನರು ನನ್ನ ಪಕ್ಷಕ್ಕೆ ಬಹುಮತ ನೀಡುವುದಿಲ್ಲ ಎಂದು ಭಾವುಕರಾಗಿ ಕಣ್ಣೀರಿಟ್ಟಿರುವ ಅವರು, ರಾಜ್ಯದ ಜನತೆ ನನಗೆ ಬಹುಮತ ಕೊಟ್ಟು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ, ನಾನು ಹೋದಕಡೆ ಜನ ಸೇರುತ್ತಾರೆ, ಸಂತೋಷ ಪಡ್ತಾರೆ, ಆದರೆ ದೌರ್ಭಾಗ್ಯವೆಂದರೆ ಅವರು ನಮ್ಮ ಪಕ್ಷಕ್ಕೆ ಮತ ನೀಡುವುದಿಲ್ಲ ಈ ಬಗ್ಗೆ ನನಗೆ ನೋವಿದೆ ಎಂದು ಭಾವುಕರಾಗಿ ನುಡಿದಿರುವುದು ಸಮ್ಮಿಶ್ರ ಸರ್ಕಾರದಲ್ಲಿರುವ ವೈಮನಸ್ಯ ಹಾಗೂ ಅದರಿಂದ ಕುಮಾರಸ್ವಾಮಿ ನೊಂದಿದ್ದಾರೆ ಎನ್ನುವುದನ್ನು ತೋರಿಸಿದೆ.
Discussion about this post