ನವದೆಹಲಿ: ಪಾಕಿಸ್ಥಾನದ ಸೈನಿಕರ ತಲೆಗಳನ್ನು ಕತ್ತರಿಸಲಾಗಿದೆ. ಆದರೆ, ಅವುಗಳನ್ನು ಪ್ರದರ್ಶಿಸಿ, ಸುದ್ದಿ ಮಾಡಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಮ್ಮ ಯಶಸ್ಸಿನ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ನಮ್ಮ ಸೈನಿಕರ ಮೇಲಿನ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲಾಗಿದೆ. ಶತ್ರುಗಳ ತಲೆ ತೆಗೆದಿದ್ದು ಹೆಮ್ಮೆ ಎಂದು ಹೇಳುವುದಿಲ್ಲ. ಆದರೆ, ನಮ್ಮ ದೇಶದ ರಕ್ಷಣೆಗಾಗಿ ನಾವು, ನಮ್ಮ ಸೇನೆ ಎಂತಹ ಸಂದರ್ಭಕ್ಕೂ ಸಹ ಸಿದ್ದ ಎಂಬುದನ್ನು ಸಾರಿದ್ದೇವೆ ಎಂದಿದ್ದಾರೆ.
ನಮ್ಮ ದೇಶದ ರಕ್ಷಣೆಗಾಗಿ ನಮ್ಮ ಸೇನೆ ಸದಾ ಸಿದ್ದವಾಗಿದೆ. ಯಾವುದೇ ಕಾರಣಕ್ಕೂ ಸಹ ಭಯೋತ್ಪಾದಕರು ನಮ್ಮ ದೇಶದೊಳಗೆ ನುಗ್ಗಲು ಬಿಡುವುದಿಲ್ಲ. ಇಂತಹ ಪ್ರಯತ್ನಗಳನ್ನು ತಡೆಯಲು ನಮ್ಮ ಸೈನಿಕರು ಗಡಿಯಲ್ಲಿ ಸದಾ ಸಿದ್ದರಿದ್ದಾರೆ ಎಂದರು.
Discussion about this post