ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಾಲೂಕಿನ ಹಲವು ಪ್ರದೇಶಗಲ್ಲಿ ಭಾನುವಾರ ಹಾಗೂ ಸೋಮವಾರ ಭಾರೀ ಮಳೆ ಸುರಿದಿದ್ದು, ಪರಿಣಾಮವಾಗಿ ಅಪಾರ ಹಾನಿ ಸಂಭವಿಸಿದೆ.
ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ಬಂಡೆತಿಮ್ಮಲಾಪುರ ಮನೆಯ ಮೇಲ್ಚಾವಣೆ ಬಿದ್ದು ಕುಟುಂಬ ನಿರಾಶ್ರಿತರಾಗಿದ್ದಾರೆ.
ನಾಯಕನಹಟ್ಟಿ ಹೋಬಳಿಯ ಮುಸ್ಟಲಗುಮ್ಮಿ ಗ್ರಾಮದ ಕೃಷ್ಣಮೂರ್ತಿ ಎಂಬುವವರ ಎರಡು ಎಕರೆ ಈರೇಕಾಯಿ ಬೆಳೆ ನೆಲಸಮವಾಗಿದ್ದು ಅಪಾರ ಹಾನಿಯಾಗಿದೆ.
ಗಂಜಿಗುಂಟೆ ಗ್ರಾಮದ ರೈತ ಶಾಂತವೀರಣ್ಣ ಎಂಬವವರ ಈರುಳ್ಳಿ ಬೆಳೆ ಸಂಪೂರ್ಣವಾಗಿ ಜಲಾವೃತಾಗಿದ್ದು ಅಪಾರ ಹಾನಿಯಾಗಿದೆ.
ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದ ಅಭೀಷೇಕ್ ನಗರದ ಹಲವು ಮನೆಗಳು ಜಲಾವೃತಗೊಂಡಿದ್ದು ಹಲವು ಕಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಅಭಿಷೇಕ್ ನಗರದ ಸುದ್ದಿ ತಿಳಿದ ಸ್ಥಳಿಯ ಶಾಸಕರು ರಾತ್ರೋ ರಾತ್ರಿಯೇ ಕಾರ್ಯಪ್ರವೃತ್ತರಾದ ಜನನಾಯಕ ಟಿ. ರಘುಮೂರ್ತಿ ಅಧಿಕಾರಿಗಳ ತಂಡದೊಂದಿಗೆ ಆಗುಸಿ ಮಳೆಬಂದ ಸ್ಥಳ ಪರೀಶಿಲನೆ ಮಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೇರೆಡೆಗೆ ವರ್ಗಾುಸಿ, ಸಮುದಾಯ ಭವನದಲ್ಲಿ ತಂಗುವಂತೆ ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಯೋಗಕ್ಷೇಮವಾಗಿ ಸ್ಥಳಾಂತರ ಮಾಡಿದ್ದಾರೆ.
ಈ ಕುರಿತಂತೆ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನಪ್ಪ ಮಾತನಾಡಿ, ದೌರ್ಜನ್ಯ ಪ್ರಕರಣದಿಂದ ಬಂದಂತಹ ಇವರುಗಳಿಗೆ ಈಗಾಗಲೇ ನೀವೆಶನ ಕಲ್ಪಿಸಲಾಗಿದೆ ಇನ್ನು ಮುಂದಿನ ದಿನಗಳಲ್ಲಿ ವಸತಿಗಳನ್ನು ಕಟ್ಟಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತೆ ಶ್ಯಾಮಲಾ, ನಗರಸಭೆ ಸದಸ್ಯ ಎಂ. ಮಲ್ಲಿಕಾರ್ಜುನ, ರಮೆಶ್‌ಗೌಡ, ಬೆಸ್ಕಾಂ ಅಧಿಕಾರಿ ತಿಮ್ಮರಾಜ್, ಇಂಜಿನಿಯಾರ್ ಲೋಕೇಶ್, ಮುಂಖಡ ಹೊನ್ನುರಾಸ್ವಾಮಿ ಇನ್ನಿತರರು ಇದ್ದರು.
ಅಲೆಮಾರಿ ಕುಟುಂಗಳೇ ವಾಸಿಸುವ ಈ ಪ್ರದೇಶದಲ್ಲಿ ಹಲವು ಜನರಿಗೆ ಈಗಾಗಲೇ ನಿವೇಶನದ ಹಕ್ಕುಪತ್ರ ನೀಡಿದೆ ಮುಂದಿನ ದಿನಗಳಲ್ಲಿ ವಸತಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು, ರಸ್ತೆ, ಚರಂಡಿ, ವಿದ್ಯುತ್ ದೀಪ ಈಗೇ ಅಂತ ಅಂತವಾಗಿ ಕಾಮಗಾರಿ ಪ್ರಾರಂಭಗೊಡಿಂದೆ ಕೆಲವೇ ದಿನಗಳಲ್ಲಿ ಸೂರು ಕಲ್ಪಿಸಲಾಗುವುದು. ಆದ್ದರಿಂದ ತಾತ್ಕಲಿಕ ಶೆಡ್ಡುಗಳಲ್ಲಿ ವಾಸ ಮಾಡುವವರು ಜಾಗರೂಕತೆಯಿಂದ ವಾಸ ಮಾಡಿ, ಮಳೆಗಾಲ ನಿಮ್ಮಿತ ನೀವು ಸಮುದಾಯ ಭನವದಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ ಅವಶ್ಯವಿದ್ದರೆ ತಟಬಲ್, ಹಾಗೂ ಇನ್ನಿತರೆ ವ್ಯವಸ್ಥೆ ಮಾಡಲಾಗುವುದು.
-ಟಿ. ರಘುಮೂರ್ತಿ, ಶಾಸಕರು
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post