ದಾವಣಗೆರೆ: ಜಿಲ್ಲೆಯಾದ್ಯಂತ ಗುಡುಗು ಬಿರುಗಾಳಿ ಸಹಿತ ಮಳೆ ಸುರಿದಿದ್ದು, ದಾವಣಗೆರೆ, ಚನ್ನಗಿರಿ, ಹರಪನಹಳ್ಳಿ ಭಾಗದಲ್ಕಿ ಆಲಿಕಲ್ಲು ಮಳೆಯಾಗಿದೆ.
ಜಿಲ್ಲೆಯ ಹರಪನಹಳ್ಳಿ ತಾಪಂ ಕಚೇರಿ ಮುಂದಿನ ಮರ ಧರೆಗೆ ಉರುಳಿದ ಪರಿಣಾಮ ಅಲ್ಲಿ ನಿಲ್ಲಿಸಲಾಗಿದ್ದ ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.
ಹರಪನಹಳ್ಳಿಯ ನಂದಿಬೇವೂರಿನಲ್ಲಿ ಮಳೆ ಬಿರುಗಾಳಿಗೆ ಮನೆಗಳಿಗೆ ಹಾನಿಯಾಗಿದ್ದು, ಬಿರುಗಾಳಿ ರಭಸಕ್ಕೆ ಮನೆ ಛಾವಣಿ ಹಾರಿಹೋಗಿದೆ.
ಇನ್ನು, ಶಾಸಕ ಕರುಣಾಕರ ರೆಡ್ಡಿ ಮನೆ ಮುಂದೆ ಮರ ಬಿದ್ದು ಅಂಗಡಿ ಜಖಂಗೊಂಡಿದೆ.
ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ಚಂದ್ರಪ್ಪ(55) ಎಂಬ ರೈತ ಸಿಡಿಲು ಬಡಿದು ಮೃತರಾಗಿದ್ದಾರೆ.
ಇನ್ನು ಬಿಸಿಲಿನ ಕಾವಿನಿಂದ ಬಳಲಿದ್ದ ದಾವಣಗೆರೆ ನಗರದಲ್ಲಿ ಉತ್ತಮ ಮಳೆ ತಂಪನೆರೆಯಿತು. ಮಳೆಯಲ್ಲಿ ನೆನೆದು ಮಹಿಳೆಯರು ಸಂತಸ ಪಟ್ಟು, ನೃತ್ಯ ಮಾಡಿ ವರುಣನ ಕೃಪೆಯನ್ನು ಸಂಭ್ರಮಿಸಿದರು.
Discussion about this post