ಧರ್ಮಸ್ಥಳ: ನೀರಿನ ತೀವ್ರ ಅಭಾವದಿಂದ ಕಂಗೆಟ್ಟಿದ್ದ ಕರಾವಳಿಯಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡದ ಜೀವನಾಡಿ ನೇತ್ರಾವತಿ ಮೈದುಂಬಿ ಹರಿಯುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸ್ನಾನಘಟ್ಟ ಭರ್ತಿಯಾಗಿದೆ.
ದಕ್ಷಿಣ ಜಿಲ್ಲೆಯಾದ್ಯಂತ ಕರಾವಳಿ ಭಾಗದಲ್ಲಿ ಮಳೆಯಾಗದೇ, ಅಂತರ್ಜಲವೂ ಸಹ ತೀರಾ ಕಡಿಮೆಯಾದ ಹಿನ್ನೆಲೆಯಲ್ಲಿ ನೀರಿಗೆ ಭಾರೀ ಪ್ರಮಾಣದಲ್ಲಿ ಬರವುಂಟಾಗಿತ್ತು. ಕೋಟ್ಯಂತರ ರೂ. ಬೆಳೆ ನಷ್ಟವೂ ಸಹ ಸಂಭವಿಸಿತ್ತು. ಆದರೆ, ಈಗ ಮಳೆಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು, ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಗುಡ್ಡ, ಮರ, ಗಿಡಗಳು ಕುಸಿದು ಹಾನಿಗೊಳಗಾಗಿವೆ. ಮಂಗಳೂರು ಸಮೀಪ ಬಲ್ಮಠ, ಉಳ್ಲಾಲ ಹತ್ತಿರ ಗುಡ್ಡ ಕುಸಿದು ಬಿದ್ದು ಮನೆಗಳಿಗೆ ಹಾನಿಗೀಡಾಗಿದ್ದು, ತೊಂದರೆಯೂ ಸಹ ಆರಂಭವಾಗಿದೆ.
Discussion about this post