ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಂದು ರಾತ್ರಿ 8.30 ವೇಳೆಗೆ ನಗರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದ್ದು, ವರುಣನ ಅಬ್ಬರಕ್ಕೆ ಕೆಲ ಕಾಲ ಅಕ್ಷರಶಃ ನಗರ ತತ್ತರಿಸಿದ ಅನುಭವ ನೀಡಿತ್ತು.
Also read: ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 51 ಆರೋಗ್ಯ ಕೇಂದ್ರಗಳ ಆಡಳಿತಾತ್ಮಕ, ಆರ್ಥಿಕ ನಿರ್ವಹಣೆ ಸರ್ಕಾರದ ಸುಪರ್ದಿಗೆ
ಮುಂಜಾನೆಯಿಂದಲೂ ಸುಡುವ ಬಿಸಿಲು ಕಂಡಿದ್ದ ನಗರ ರಾತ್ರಿ ವೇಳೆಗೆ ಸುಮಾರು ಮುಕ್ಕಾಲು ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆ ಹಾಗೂ ಗಾಳಿಯ ಅಬ್ಬರ ಕೆಲ ಕಾಲ ತತ್ತರಿಸಿದ ಅನುಭವ ನೀಡಿತ್ತು. ಜೊತೆಗೆ ಗುಡುಗು ಸಿಡಿಲು ಸಹ ಅಬ್ಬರಿಸಿದ್ದು, ಮಳೆ ಗಾಳಿಯ ಹೊಡೆತಕ್ಕೆ ಮನೆಗಳಿಗೆ ಕಿಟಕಿ ಹಾಗೂ ಬಾಗಿಲುಗಳಿಂದ ನೀರು ನುಗ್ಗಿ ತೊಂದರೆಯಾದ ಕುರಿತಾಗಿ ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















