ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಇಂದು ಸಂಜೆ ವೇಳೆಗೆ ನಗರದಲ್ಲಿ ಭಾರೀ ಬೀಸಿದ್ದು, ಇದರ ಅಬ್ಬರ ಕೊಂಚ ಹೆಚ್ಚಾಗಿಯೇ ಇದ್ದ ಕಾರಣ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ಸಂಜೆ 6.45ರ ವೇಳೆಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಬಿರುಗಾಳಿಯ ರೀತಿಯಲ್ಲಿ ಗಾಳಿ ಬೀಸಿದ್ದು, ಇದರ ಅಬ್ಬರಕ್ಕೆ ಮನೆ ಕಟ್ಟಡಗಳ ಕಿಟಿಕಿ, ಬಾಗಿಲುಗಳು ಸಹ ಹೊಡೆದುಕೊಂಡಿದ್ದು, ಮರ-ಗಿಡಗಳೂ ಭಾರೀ ಶಬ್ದದೊಂದಿಗೆ ಅಲುಗಾಡಿದ್ದು, ಆತಂಕಕ್ಕೆ ಕಾರಣವಾಗಿತ್ತು. ಇನ್ನು ಗಾಳಿಯ ಅಬ್ಬರಕ್ಕೆ ನಗರದ ಬಹಳಷ್ಟು ಪ್ರದೇಶಗಳಲ್ಲಿ ಧೂಳು ಸೃಷ್ಠಿಯಾಗಿತ್ತು.
ಹಲವು ಮನೆಗಳ ಮೇಲೆ ಒಣಗಿ ಹಾಕಿದ್ದ ಬಟ್ಟೆಗಳು ಕ್ಲಿಪ್ ಸಮೇತ ಬಹಳಷ್ಟು ಕಡೆ ಹಾರಿ ಹೋಗಿವೆ.
ಭಾರೀ ಗಾಳಿಯ ಬೆನ್ನಲ್ಲೇ ಮಳೆಯೂ ಸಹ ನಗರದಲ್ಲಿ ಸುರಿದಿದ್ದು, ಸುಮಾರು 1 ಗಂಟೆಗಳ ಕಾಲ ವರುಣ ತಂಪೆರೆದಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















