ಥಟ್ಟನೆ ಭೂಮಿಯ ಮೇಲಿನ ನರಕ ಯಾವುದು ಅಂದರೆ ಸಾಮಾನ್ಯ ಜನ ಹೇಳುವುದು ಸಿರಿಯಾ, ಇರಾಕ್ ಅಥವಾ ಇನ್ನಾವುದೋ ಆಫ್ರಿಕನ್ ದೇಶ. ಆದರೆ ಅವೆಲ್ಲವನ್ನೂ ಮೀರಿಸುವ ಮಾನವ ಹಕ್ಕುಗಳಿಗೆ ಬೆಲೆಯೇ ಇಲ್ಲದ ದೇಶ ಎಂದರೆ ಉತ್ತರ ಕೊರಿಯಾ. ಉತ್ತರ ಕೊರಿಯಾ ರಚನೆಯಾ ದದ್ದು 1948ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಅಂದರೆ ಇಂದಿನ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್, ಅವನಪ್ಪ ಕಿಮ್ ಜಾಂಗ್ ಇಲ್, ಅವನ ಅಜ್ಜ ಕಿಮ್ ಜಾಂಗ್ ಸಂಗ್ ಎಲ್ಲರೂ ಸರ್ವಾಧಿಕಾರಿಗಳೇ. ಎಲ್ಲರೂ ಜನರನ್ನು ಪಶುಗಳಿಗಿಂತ ಕಡೆಯಾಗಿ ನಡೆಸಿಕೊಂಡು ಕ್ರಿಮಿಕೀಟಗಳಂತೆ ಕೊಲ್ಲುವುದನ್ನೇ ಹವ್ಯಾಸ ಮಾಡಿ ಕೊಂಡು ಬಂದಿ ದ್ದಾರೆ. ಮಿಲಿಟರಿ ವಿಸ್ತರಣೆಯನ್ನೇ ಕಾಯಕ ಮಾಡಿ ಕೊಂಡಿರುವ ಉತ್ತರ ಕೊರಿಯಾ ಜಗತ್ತಿನ ಶಾಂತಿಗೆ ಮುಳ್ಳಾಗುವ ಲಕ್ಷಣ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಇತಿಯಾಸ ಮತ್ತು ವರ್ತಮಾನದ ಬಗ್ಗೆ ತಿಳಿಯಬೇಕಾಗಿದೆ.
ಕೊರಿಯಾದ ಇತಿಹಾಸ: 1948ರಲ್ಲಿ ಕೊರಿಯಾ ಇಬ್ಭಾಗವಾಗಿ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ರಚನೆಯಾಗುವ ಮೊದಲು ನೂರಾರು ವರ್ಷಗಳಿಂದ ಒಂದೇ ದೇಶವಾಗಿತ್ತು. 1910ರಲ್ಲಿ ಜಪಾನ್‌ನ ಸಾಮ್ರಾಜ್ಯ ಶಾಹಿ ವಕ್ರದೃಷ್ಠಿಗೆ ಬಿದ್ದು ಜಪಾನ್ ಕೈವಶವಾಯಿತು. ಜಪಾನ್ ತನ್ನ ಲಾಭಕ್ಕಾಗಿ ಮಾತ್ರ ಕೊರಿಯಾದ ನೆಲೆ ಮತ್ತು ಜನರನ್ನು ಬಳಸಿಕೊಂಡಿ ದ್ದಲ್ಲದೆ, ಕೊರಿಯಾದ ಸಂಸ್ಕೃತಿಯನ್ನೇ ಸಂಪೂರ್ಣವಾಗಿ ಬದಲಿಸಲು ಪ್ರಯತ್ನಿಸಿತು. ಕೊರಿಯನ್ನರು ಜಪಾನಿ ಹೆಸರು ಇಟ್ಟುಕೊಳ್ಳುವುದದನ್ನು, ಜಪಾನಿ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಕಡ್ಡಾಯ ಮಾಡಿತ್ತು. ಇದರ ಜೊತೆ ಜೊತೆಗೆ ಪರ್ಲ್ ಹಾರ್ಬರ್ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದ ಜಪಾನ್ ವಾಯುಪಡೆ ಅಮೆರಿಕಾವನ್ನು ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದಂತಾಗಿತ್ತು. ಬ್ರಿಟನ್ ಮತ್ತು ಸೋವಿಯತ್ ಪಡೆಗಳನ್ನು ಕೂಡಿಕೊಂಡ ಅಮೆರಿಕಾ ಜಪಾನ್ ಮೇಲೆ ಯುದ್ಧ ಸಾರಿತ್ತು.
ಮುಂದುವರೆಯುವುದು…
Discussion about this post