ಶ್ರೀನಗರ: ಇಡಿಯ ದೇಶ ಗೌರಿ ಹಬ್ಬದ ಸಂಭ್ರಮದಲ್ಲಿದ್ದರೆ, ಗಡಿಯಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಓರ್ವ ಸಿಆರ್‌ಪಿಎಫ್ ಯೋಧ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಜಮ್ಮು ಹಾಗೂ ಶ್ರೀನಗರ ಹೆದ್ದಾರಿಯ ಝಜರ್ ಕೋಟ್ಲಿ ಪೊಲೀಸ್ ಚೆಕ್ ಪೋಸ್‌ಟ್ ಬಳಿ ಘಟನೆ ನಡೆದಿದ್ದು, ಗಾಯಾಳು ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಕಾಟ್ರಾ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಈ ಭಾಗದಲ್ಲಿ ಅಡಗಿದ್ದಾರೆ ಎಂದು ತಿಳಿದುಬಂದಿರುವ ಭಯೋತ್ಪಾದಕರ ಪತ್ತೆಗೆ ಕಾರ್ಯಾಚರಣೆ ಚುರುಕುಗೊಂಡಿದೆ.
Discussion about this post