ಡೆಹ್ರಾಡೂನ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಅಜರಾಮರವಾಗಿಸುವಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಉತ್ತರಾಖಂಡ್‌ನಲ್ಲಿರುವ ಹಿಮಾಲಯ ಪರ್ವತದ ತುದಿಯೊಂದಕ್ಕೆ ಅಟಲ್ ಜೀ ಹೆಸರು ನಾಮಕರಣ ಮಾಡಲಾಗುತ್ತಿದೆ.
ಈ ಕುರಿತಂತೆ ಉತ್ತರಾಖಂಡ್ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಉತ್ತರಾಖಂಡ್ ನ ನೆಹರೂ ಇನ್ ಸ್ಟಿಟ್ಯೂಟ್ ನ ಪರ್ವತಾರೋಹಿಗಳ ತಂಡವೊಂದು ಇನ್ನೂ ಜಗತ್ತಿಗೆ ಪರಿಚಯವಾಗದ ಹಿಮಾಲಯ ಪರ್ವತದ ತುದಿಯೊಂದಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅವರು ಅದನ್ನು ತಲುಪಿದ ನಂತರ ಅದನ್ನು ಜಗತ್ತಿಗೆ ಪರಿಚಯಿಸಿ, ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಉತ್ತಮ ಆಡಳಿತಗಾರ ಮಾತ್ರವಲ್ಲದೇ, ಸೂಕ್ಷ್ಮ ಸಂವೇದಿ ಕವಿ ಹೃದಯದ ಸ್ನೇಹ ಜೀವಿಯಾಗಿದ್ದರು.
ನಿಸರ್ಗವನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ಅಟಲ್ ಜೀ ಅವರ ಹೆಸರನ್ನು ಅಜರಾಮರವಾಗಿಸಲು ಜಾರ್ಖಂಡ್ ಸರ್ಕಾರ ಇಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
Discussion about this post