ಕಲ್ಪ ಮೀಡಿಯಾ ಹೌಸ್ | ಹಿರೇಕೆರೂರು |
ಕಳೆದ ಶುಕ್ರವಾರ ಸುರಿದ ಭಾರಿ ಗಾಳಿ ಮಳೆಗೆ ಹಿರೇಕೆರೂರು ತಾಲೂಕಿನ ಯಮ್ಮಿಗನೂರು ಗ್ರಾಮಕ್ಕೆ ಕೃಷಿ ಸಚಿವರೂ ಆಗಿರುವ ಹಿರೇಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ್ Minister B C Patil ಭೇಟಿ ನೀಡಿ ಗ್ರಾಮದಲ್ಲಾದ ಬೆಳೆನಷ್ಟವನ್ನು ವೀಕ್ಷಿಸಿ ಪರಿಶೀಲಿಸಿದರು.
ಯಮ್ಮಿಗನೂರಿನಿಗೆ ತಹಶೀಲ್ದಾರ್ ಜೊತೆ ಭೇಟಿ ನೀಡಿದ ಬಿ.ಸಿ.ಪಾಟೀಲ್, ನಷ್ವವಾದ ಬೆಳೆಯನ್ನು ಪರಿಶೀಲಿಸಿ ನಷ್ಟ ಸಂಬಂಧ ಸಂಪೂರ್ಣ ಮಾಹಿತಿ ಪಡೆದು ವರದಿ ನೀಡುವಂತೆ ಸೂಚಿಸಿದರು.
ಅಲ್ಲದೇ ಇಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದ ತಕ್ಷಣ ಹಾಗೂ ರೈತರು ಜನರಿಂದ ದೂರು ಮನವಿ ಬಂದಲ್ಲಿ ಅಧಿಕಾರಿಗಳು ತಕ್ಷಣ ತಡಡುವುದಾಗಲೀ ನಿರ್ಲಕ್ಷ್ಯ ಮಾಡುವುದಾಗಲೀ ಮಾಡದೇ ಮೊದಲು ಸ್ಥಳ ಪರಿಶೀಲಿಸಿಸಬೇಕು. ಅದಕ್ಕಿಂತ ಮೊದಲು ಏನಾಗಿದೆ ಎಂಬುದರ ಮಾಹಿತಿ ಪಡೆಯಬೇಕು. ರೈತರ ವಿಚಾರದಲ್ಲಾಗಲೀ ಅಥವಾ ಸಾರ್ವಜನಿಕರ ವಿಚಾರದಲ್ಲಾಗಲೀ ಸ್ಪಂದಿಸದ ಯಾವುದೇ ಅಧಿಕಾರಿಗಳ ಧೋರಣೆಯನ್ನು ತಾವು ಒಪ್ಪವುದಿಲ್ಲ. ಇಂತಹ ಘಟನೆಗಳು ಗಮನಕ್ಕೆ ಬಂದ ತಕ್ಷಣ ಸ್ಥಳೀಯವಾಗಿರುವ ಅಧಿಕಾರಿಗಳು ಜನಪ್ರತಿನಿಧಿಗಳು ಮೊದಲು ಭೇಟಿ ನೀಡಿ ಸಾರ್ವಜನಿಕರ ಅಳಲನ್ನು ಕೇಳಬೇಕು. ಸ್ಥಳೀಯವಾಗಿ ಸಮಸ್ಯೆಗಳು ಪರಿಹಾರವಾಗುವುದಾದರೆ ಸ್ಥಳೀಯವಾಗಿಯೇ ಮೊದಲು ಪರಿಹರಿಸಿ ಜನರಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು. ಬೆಳೆ ನಷ್ಟವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಬಿ.ಸಿ.ಪಾಟೀಲ್ ಹೇಳಿದರು.
Also read: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಯಶಸ್ಸಿಗೆ ಹೊಸ ಕಾರ್ಯತಂತ್ರ ಅನಿವಾರ್ಯ: ಡಾ. ಕೊಟ್ರೇಶ್ವರ್
ತಹಶೀಲ್ದಾರ್ ಉಮಾರವರಿಗೆ ಸೂಚಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ನಿಜವಾಗಿಯೂ ಯಾವ ಬೆಳೆ ಹೇಗೆ ನಷ್ಟವಾಗಿದೆ. ಪರಿಹಾರವೇನು ಎಂಬುದರ ನಿಖರ ಮಾಹಿತಿ ಸಲ್ಲಿಸುವಂತೆ ನಿರ್ದೇಶಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post