ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ಅಧಿಕ ಮಾಸ #AdhikaMasa ಸಾಧನೆ ಮಾಡುವುದಕ್ಕೆ ಅತ್ಯಂತ ಪವಿತ್ರ ಹಾಗೂ ಉತ್ತಮ ಕಾಲ. ಈಗ ಮಾಡಿದ ಕಾರ್ಯಗಳು ಭಗವಂತನ ವಿಶೇಷ ಪ್ರೀತಿಗೆ ಕಾರಣ ಆಗಲಿದೆ ಎಂದು ಉತ್ತರಾದಿ ಮಠದ #UttaradiMutt ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.
28ನೆಯ ಚಾತುರ್ಮಾಸ್ಯದ #Chaturmasya ಸಂದರ್ಭದಲ್ಲಿ ಶ್ರೀಪಾದಂಗಳವರು ಅಧಿಕ ಶ್ರಾವಣ ಮಾಸದಲ್ಲಿ #ShravanaMasa ಮಕ್ಕಳು, ಯುವಕರು ಮತ್ತು ಯುವತಿಯರು ಏನು ಮಾಡಬೇಕು ಮತ್ತು ಏನು ಮಾಡಬಾರದೆಂಬ ಕುರಿತು ಸಂದೇಶ ನೀಡಿದರು.

Also read: ವಿಧಾನಸಭೆಯಲ್ಲಿ ಹೈಡ್ರಾಮಾ: 10 ಬಿಜೆಪಿ ಸದಸ್ಯರ ಅಮಾನತು | ಸ್ಪೀಕರ್ ಕಚೇರಿ ಮುಂದೆ ಧರಣಿ
ಆರಂಭದಲ್ಲೇ ಕಠಿಣ ನೇಮಗಳ ಆಚರಣೆ ಅಸಾಧ್ಯ. ಹೀಗಾಗಿ ಮಕ್ಕಳು ಅಧಿಕ ಮಾಸದ ಈ ಒಂದು ತಿಂಗಳ ಅವಧಿಯಲ್ಲಿ ಪ್ರತಿ ದಿನ 33 ಬಾರಿ ಹರಿನಾಮ ಸ್ಮರಣೆ ಮಾಡಬೇಕು. (ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ. ಇದೂ ಕಠಿಣವಾದರೆ ಶ್ರೀರಾಮ್ ಜೈರಾಮ್ ಇಷ್ಟೇ ಸಾಕು). ಹತ್ತಿರದಲ್ಲಿ ದೇವಳವಿದ್ದರೆ ನಿತ್ಯವೂ ಪ್ರದಕ್ಷಿಣಾ ನಮಸ್ಕಾರ ಮಾಡಬೇಕು ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post