ನವದೆಹಲಿ: ಸುಪ್ರೀಂ ಕೋರ್ಟ್ ಅಂಗಳದಲ್ಲಿರುವ ಸಲಿಂಗಕಾಮ ವಿಚಾರದ ಇಂದು ಮಹತ್ವದ ತೀರ್ಪು ಹೊರಬೀಳಲಿರುವ ಬೆನ್ನಲ್ಲೇ , ಸಲಿಂಗಕಾಮ ಹಿಂದುತ್ವಕ್ಕೆ ವಿರುದ್ಧವಾಗಿದ್ದು, ಪ್ರಾಕೃತಿಕವಲ್ಲ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯಂ ಸ್ವಾಮಿ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇದು ಪ್ರಾಕೃತಿಕವಲ್ಲ. ಇದು ಸಂಭ್ರಮಿಸುವ ವಿಚಾರವಲ್ಲ. ಪ್ರಮುಖವಾಗಿ ಇದು ಹಿಂದುತ್ವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
ಇಂತಹ ವಿಚಾರಗಳ ಕುರಿತಾಗಿ ಸಂಶೋಧನೆ ನಡೆಸಲು ಮುಂದಾಗಬೇಕಿದೆ. ಇದರ ವಿಚಾರಣೆಗಾಗಿ ಸರ್ಕಾರ ವಿಶೇಷ ಪೀಠವನ್ನು ರಚಿಸಬೇಕು ಎಂದಿದ್ದಾರೆ.
2013 ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗಿಗಳ ನಡುವಿನ ಲೈಂಗಿಕತೆ ಅಪರಾಧ ಎಂದು ತೀರ್ಪು ನೀಡಿತ್ತು. ಸಲಿಂಗಕಾಮ ಅಪರಾಧ ಎನ್ನುವ ಕುರಿತ ತೀರ್ಪಿನ ಮರುಪರಿಶೀಲನೆಯ ಅಂತಿಮ ತೀರ್ಪು ಇಂದು ಹೊರ ಬೀಳಲಿದೆ.















