ಕಲ್ಪ ಮೀಡಿಯಾ ಹೌಸ್ | ಹೊಸನಗರ |
ಮಾವಿನಕೊಪ್ಪದಲ್ಲಿರುವ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಬೀಗ ಒಡೆದು ಪ್ರಶ್ನೆ ಪತ್ರಿಕೆಯನ್ನು ಚೆಲ್ಲಾಪಿಲ್ಲಿಯಾಗಿ ಹರಡಿ ಹೋಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಕಾಲೇಜಿನ ಗೇಟ್, ಆಫೀಸ್ ಛೇಂಬರ್, ವಿಜ್ಞಾನ ವಿಭಾಗ ಕಚೇರಿ ಸೇರಿದಂತೆ ಮೂರು ಕಡೆ ಬೀಗ ಮುರಿದಿದ್ದು, ಫೈಲ್ ಗಳು ಚೆಲ್ಲಾಪಿಲ್ಲಿಯಾಗಿವೆ ಎಂದು ಪ್ರಾಂಶುಪಾಲ ಪ್ರಭಾಕರ್ ರಾವ್ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಹೊಸನಗರ ಪೊಲೀಸರು, ತನಿಖೆ ಕೈಗೊಂಡಿದ್ದು ಮಾಹಿತಿ ಕಲೆಹಾಕುತ್ತಿದ್ದಾರೆ. ಪರೀಕ್ಷೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆಯಾ? ಅಥವಾ ಬೇರೆ ಉದ್ದೇಶಕ್ಕೆ ನಡೆದಿದೆಯಾ? ಎಂಬುದರ ಬಗ್ಗೆ ತನಿಖೆಯಿಂದ ಹೊರಬೀಳಬೇಕಿದೆ.
Also read: ನಾವೀನ್ಯ ಚಿಂತನೆಗಳಿಗೆ ಪರಮ್ ಉತ್ಕರ್ಷ್ ಪೂರಕ: ಡಾ.ಎಸ್.ಡಿ. ಸುದರ್ಶನ್


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















