ಕಲ್ಪ ಮೀಡಿಯಾ ಹೌಸ್ | ಹೊಸನಗರ |
ಪರೀಕ್ಷೆಯಲ್ಲಿ ನಕಲು ಮಾಡಿದ ಎನ್ನುವ ಕಾರಣಕ್ಕೆ ಪರೀಕ್ಷಾ ಮೇಲ್ವಿಚಾರಕ ವಿದ್ಯಾರ್ಥಿಯೊಬ್ಬನ ಕೈಯನ್ನು ಕಚ್ಚಿರುವ ಘಟನೆ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ಅಂತಿಮ ಬಿಎ ಪದವಿ ಓದುತ್ತಿರುವ ಕೀರ್ತೇಶ್ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಉಪನ್ಯಾಸಕ ಅಂಜನ್ ಕುಮಾರ್ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಬಳಿ ಇದ್ದ ಮೊಬೈಲ್ ನ್ನು ಕಿತ್ತುಕೊಳ್ಳಲು ಅಂಜನ್ ಕುಮಾರ್ ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಕೀರ್ತೆಶ್ ಪರೀಕ್ಷಾ ಮೇಲ್ವಿಚಾರಕ ಅಂಜನ್ ಕುಮಾರ್ ರವರಿಗೆ ಉಡಾಫೆ ಉತ್ತರಗಳನ್ನು ನೀಡಿದ ಎನ್ನಲಾಗುತ್ತಿದೆ. ಇದರಿಂದ ಸಿಟ್ಟಿಗೆದ್ದ ಪರೀಕ್ಷಾ ಮೆಲ್ವಿಚಾರಕ ಅಂಜನ್ ಕುಮಾರ್ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸುವುದರ ಜೊತೆಗೆ ಕೈಯನ್ನು ಕಚ್ಚಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿ ಹೊಸನಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿ ಪೋಲಿಸರಿಗೆ ದೂರು ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ.
Also read: ಸಮಸ್ಯೆಗಳ ಹಿಂದಿನ ಆತ್ಮವಲೋಕನ ಮಾಡಿಕೊಂಡು ಬನ್ನಿ… ಮಾತಾಡೋಣ: ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ಸ್ಪಷ್ಟನೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















