ಕಲ್ಪ ಮೀಡಿಯಾ ಹೌಸ್
ಹೊಸನಗರ: ಕೊರೋನಾ ಸಂಕಷ್ಟದ ಸಮಯದಲ್ಲಿಯೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನಿತ್ಯ ಏರಿಕೆಯಾಗುತ್ತಿರುವುದನ್ನು ಖಂಡಿಸಿ ತಾಲ್ಲೂಕು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ಮಾತನಾಡಿ, ಆಡಳಿತ ನಡೆಸುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣ ವಿಪಲವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಅತಿ ಕಡಿಮೆ ದರದಲ್ಲಿ ನೀಡುತ್ತೆವೆ ಎಂದು ಪ್ರಣಾಳಿಕೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನೂರು ರೂಪಾಯಿ ಗಡಿ ದಾಟಿಸದೆ ಇಂದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈತರ ವ್ಯವಸಾಯಕ್ಕೆ ಟ್ರ್ಯಾಕ್ಟರ್-ಟಿಲ್ಲರ್ ಮುಂತಾದ ಇಂಧನ ಉಪಕರಣ ಆಧುನಿಕವಾಗಿ ಬಳಸುತ್ತಿದ್ದರು. ಇದೇ ರೀತಿ ಪೆಟ್ರೋಲ್-ಡಿಸೇಲ್ ದರ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಹಳೆ ಪದ್ದತಿಯಲ್ಲಿರುವ ಎತ್ತುಗಳನ್ನ ರೈತರು ಉಳುಮೆಗೆ ಹುಡುಕಿಕೊಳ್ಳಬೇಕಾಗುತ್ತದೆ. ಇದೇ ಮೋದಿಯವರ ಆಚ್ಚೆ ದಿನ್ ಇರಬೇಕು ಎಂದು ದೂರಿದರು.
ತಕ್ಷಣ ಪೆಟ್ರೋಲ್ ಡಿಸೇಲ್ ದರ ಇಳಿಸದ್ದಿದರೆ ಕೊರೋನಾ ನಡುವೆಯೆ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಸಾಗರ ವಿಧಾನ ಸಭಾ ಕ್ಷೇತ್ರದ ಎನ್‌ಎಸ್‌ಯುಐ ಅಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ಯುವ ಕಾಂಗ್ರೆಸ್ ನಾಯಕ ರಾಘು ದಣಂದೂರು ಹಾಗೂ ಕುಮಾರ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post