ಕಲ್ಪ ಮೀಡಿಯಾ ಹೌಸ್ | ಹೊಸನಗರ |
ಮೀಸಲು ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಪುಣಜೆ ಗ್ರಾಮದ ಸರ್ವೆ ನಂ.6, 35 ಹಾಗೂ 39ರಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಪಟ್ಟಣದ ನಿವಾಸಿ ಚಂದನ್ ಹಾಗೂ ಚಂದ್ರು ಸಾಗರದ ಹರೀಶ್ ಎಂಬುವವರು ಪಿಕ್ ಅಪ್ ಹಾಗೂ ಟಿಪ್ಪರ್ ಲಾರಿಗಳನ್ನು ಬಳಸಿ ಮರಳು ಸಾಗಾಟ ನಡೆಸುತ್ತಿದ್ದರು. ಮರಳು ಸಾಗಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
Also read: ಶಿವಮೊಗ್ಗ | ಶೂ ಒಳಗೆ ಬುಸುಗುಟ್ಟಿದ ನಾಗರ ಹಾವು!
ಆರ್‌ಎಫ್‌ಓ ಅನಿಲ್‌ಕುಮಾರ್, ಡಿಆರ್‌ಎಫ್‌ಓ ಅನಿಲ್ ಬೆಳ್ಳೆನವರ್, ಸಿಬ್ಬಂದಿಗಳಾದ ಪ್ರವೀಣಕುಮಾರ್, ರಾಘವೇಂದ್ರಗೌಡ, ರಮೇಶ್, ನವೀನ, ಕೃಷ್ಣಮೂರ್ತಿ ಕಾರ‍್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post