ಕಲ್ಪ ಮೀಡಿಯಾ ಹೌಸ್
ಹೊಸಪೇಟೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘ ವತಿಯಿಂದ ಶ್ರೀ ಸಾಯಿ ಲೀಲಾ ಕಲ್ಯಾಣ ಮಂಟಪದಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬನ್ನಿ ಸಹೋದರರೆ ಬನ್ನಿ ಭಾಂದವರೆ ದೇಶಭಕ್ತಿ ಗೀತೆಯೊಂದಿಗೆ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಕಾರ್ಯಕ್ರಮಕ್ಕೂ ಮುನ್ನ ಆರ್‌ಎಸ್‌ಎಸ್ ಘಟಕದ ಮುಖ್ಯಸ್ಥರಾದ ನಾಗರಾಜ್ ಅವರು ನಮ್ಮ ಮನೆ ಎಂಬ ಸುಂದರವಾದ ಹಾಡನ್ನು ಎಲ್ಲರಿಗೂ ಹೇಳಿಕೂಡುವುದರ ಮೂಲಕ ನಮ್ಮ ಮನೆಯ ಪರಿಚಯ ಮತ್ತೆ ಮರುಕಳಿಸುವಂತೆ ಮಾಡಿದರು.
ನಂತರ ಹೊಸಪೇಟೆಯ ನಾಟ್ಯ ಕಲಾ ಶಾಲೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಹೊಸಪೇಟೆ, ಹುಲುಗಿ ಮತ್ತು ಮರಿಯಮ್ಮನ ಹಳ್ಳಿಯ ಮಕ್ಕಳಿಂದ ಶ್ರೀನಿವಾಸ ಕಲ್ಯಾಣ ಭರತನಾಟ್ಯ ಪ್ರದರ್ಶನ ನೆರವೇರಿಸಲಾಯಿತು.


ನಗರದ ಹಿರಿಯ ಕುಟುಂಬದ ಗಣಪತಿ ಕಾಮತ್, ಪಾಟೀಲ್ ದಂಪತಿಗಳು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ಮುಖ್ಯಸ್ಥರಾದ ಸು.ರಾಮಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಂದರ ಕುಟುಂಬ – ಸಂಸಾರ ಜವಾಬ್ದಾರಿ ವಿಷಯಗಳ ಕುರಿತು ಸು.ರಾಮಣ್ಣ ಮಾತನಾಡಿ, ನಮ್ಮ ಆರೋಗ್ಯ, ವ್ಯಕ್ತಿ ವಿಕಸನ ಪದ್ಧತಿ ಮತ್ತು ಓಂ ಕಾರ ಪದ್ದತಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.


ಸುಮಾರು 400ಕ್ಕೂ ಹೆಚ್ಚು ಹೊಸಪೇಟೆ ಮತ್ತು ಸುತ್ತಮುತ್ತಲಿನ ಗ್ರಾಮದ ಆರ್‌ಎಸ್‌ಎಸ್ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುಟುಂಬದ ಮಕ್ಕಳಿಗೆ ಮನೋರಂಜನೆಯಾಗಿ ಆಟಗಳನ್ನು ಆಡಿಸುವ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಹೊಸಪೇಟೆಯ ಹೆಸರಾಂತ ಉದ್ಯಮಿಗಳು, ರಾಜಕೀಯ ಮುಖಂಡರು ಮತ್ತು ಶ್ರೀ ಸಾಯಿಲೀಲಾ ಮಂದಿರದ ಮಾಲಿಕರಾದ ಗವಿಯಪ್ಪ ನವರಿಗೆ ಅಭಿನಂದನೆಗಳ ಮೂಲಕ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಉಪನ್ಯಾಸದ ನಂತರ ಗೌರವ ಸಮರ್ಪಣೆ ಮಾಡಿ, ವಂದನಾರ್ಪಣೆ ಮಾಡಲಾಯಿತು.
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















