ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ (ವಿಜಯನಗರ) |
ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ನಂತರ ವಿಜಯನಗರ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಉಮೇಶ,ಗುರುಬಸವರಾಜ ಅವರನ್ನು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಖಜಾನೆ ಇಲಾಖೆಯ ಉಪನಿರ್ದೇಶಕ ವೆಂಕಟೇಶಮೂರ್ತಿ,ಖಜಾನೆ ಇಲಾಖೆಯ ಅಧೀಕ್ಷಕ ರಾಘವೇಂದ್ರ ಮತ್ತಿತರರು ಇದ್ದರು.
ಪ್ರಥಮ ದರ್ಜೆ ಸಹಾಯಕರಾದ ಉಮೇಶ ಮತ್ತು ಗುರುಬಸವರಾಜ ಅವರು ಕಾರ್ಗಿಲ್ ಯುದ್ದದ ಹೋರಾಟ, ನಂತರದ ವಿಜಯೋತ್ಸವ ಹಾಗೂ ಇನ್ನೀತರ ನೆನಪುಗಳನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು.
Also read: ವಿದ್ಯಾರ್ಥಿಗಳು ವಿಎಸ್‍ಕೆ ವಿವಿ ವ್ಯಾಪ್ತಿಯ ಈ 6 ಕಾಲೇಜಿನಲ್ಲಿ ಪ್ರವೇಶಾತಿ ಹೊಂದಬಾರದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post