ಹೊಸಪೇಟೆ: ನಗರದ ಖ್ಯಾತ ವೈದ್ಯ ಡಾ.ರಾಘವೇಂದ್ರ ರಾವ್ ಹಾಗೂ ಡಾ.ರಾಜೇಶ್ವರಿ ಪುತ್ರ ಡಾ.ಶಂಕರ್ ಕ್ಯಾನ್ಸರ್ ಸಂಬಂಧಿತ ಸರ್ಜಿಕಲ್ ಆಂಕಾಲಾಜಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ನಗರಕ್ಕೆ ಕೀರ್ತಿ ತಂದಿದ್ದಾರೆ.
ಮುಂಬೈನಲ್ಲಿ ಡಿಎನ್’ಬಿ ವತಿಯಿಂದ ಇತ್ತೀಚೆಗೆ 2018-19 ನೆಯ ಸಾಲಿನ ನಡೆಸಿದ ರಾಷ್ಟ್ರೀಯ ಪರೀಕ್ಷೆಯಲ್ಲಿ ದೇಶದ ನಾನಾ ಭಾಗದ ಒಟ್ಟು 800 ಕ್ಕೂ ಹೆಚ್ಚು ವೈದ್ಯರು ಈ ಪರೀಕ್ಷೆಯಲ್ಲಿ ಹಾಜರಾಗಿದ್ದರು. ಈ ಪೈಕಿ ಡಾ.ಶಂಕರ್ ಅವರು ಉತ್ತಮ ಸ್ಪರ್ಧೆ ನೀಡುವ ಮೂಲಕ ಚಿನ್ನದ ಪದಕಗಳಿಸಿದ್ದಾರೆ.
ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದಲ್ಲಿ ಕ್ಯಾನ್ಸರ್ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಯಾನ್ಸರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವರನ್ನು ಶೀಘ್ರವಾಗಿ ಗುಣಮುಖರನ್ನಾಗಿ ಮಾಡಲು ಹೆಚ್ವಿನ ಸಹಕಾರಿಯಾಗಲಿದೆ ಎಂದು ಡಾ.ಶಂಕರ್ ಅವರ ತಂದೆ ಡಾ.ರಾಘವೇಂದ್ರ ರಾವ್ ತಿಳಿಸಿದ್ದಾರೆ.
ದೇಶದ ನಾನಾ ಭಾಗಗಳ ಸೂಪರ್ ಸ್ಪೆಷಲ್ ಆಸ್ಪತ್ರೆಯಿಂದ ನೂರಾರು ವೈದ್ಯರು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಈ ಕಠಿಣ ಪರೀಕ್ಷೆಯಲ್ಲಿ ಉತ್ತಮ ಸ್ಪರ್ಧೆ ನೀಡುವ ಮೂಲಕ ಚಿನ್ನದ ಪದಕ ಗಳಿಸಿರುವುದು ನಗರಕ್ಕೆ ಮಾತ್ರವಲ್ಲ ಜಿಲ್ಲೆ ಹಾಗೂ ಇಡಿ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಡಾ.ಶಂಕರ್ ಅವರು ನಗರದ ಡಾ.ಗೋಪೀನಾಥ ರಾವ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಪೂರೈಸಿದ್ದಾರೆ.
ಡಾ.ಶಂಕರ್ ಅವರ ಸಾಧನೆಗೆ ಸ್ಥಳೀಯ ಭಾರತೀಯ ವೈದ್ಯ ಸಂಘ, ಬ್ರಾಹ್ಮಣ ಸಂಘ, ಪ್ರಸನ್ಮ ಯುವ ಮಂಡಳಿ, ಮಂತ್ರಾಲಯ ದಾಸ್ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಘಟಕ ಹಾಗೂ ಡಾ.ಸುಧೀಂದ್ರ, ಡಾ.ಯೋಗಿತ ರಾವ್, ಡಾ.ಜುಬೇರ್, ಮುಸ್ಲಿಂ ಸಮುದಾಯದ ಮುಖಂಡ ಜಲೀಲ್, ಸಾಧೀಕ್, ಯಕ್ಬಲ್ ಸೇರಿದಂತೆ ಬೆಂಗಳೂರಿನ ವಿಜಯ ಕಾಲೇಜು ಹಾಗೂ ಹೊಸಪೇಟೆ ಡಾ.ಗೋಪಿನಾಥ್ ರಾವ್ ಶಾಲೆ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
(ವರದಿ: ಮುರಳೀಧರ ನಾಡಿಗೇರ್, ಹೊಸಪೇಟೆ)
Get In Touch With Us info@kalpa.news Whatsapp: 9481252093, 94487 22200
Discussion about this post