ಹೊಸಪೇಟೆ: ಒತ್ತಡದ ಯಾಂತ್ರಿಕ ಜೀವನದಲ್ಲಿ ಬದುಕನ್ನು ನೆಮ್ಮದಿಯಾಗಿ ಸಂತಸದ ಜೀವನ ಕಾಣಬೇಕಾದರೆ ಧ್ಯಾನ ಮತ್ತು ಯೋಗ ಮೈಗೂಡಿಸಿಕೊಂಡಾಗ ಮಾತ್ರ ಆರೋಗ್ಯ ಸಮಾಜ ಕಟ್ಟಲು ಸಾಧ್ಯ ಎಂದು ಹೊಸಪೇಟೆಯ ಶಾರದಾಶ್ರಮದ ಮುಖ್ಯಸ್ಥರಾದ ಮಾತಾಜಿ ಪ್ರಬೋಧಮಯಿ ತಿಳಿಸಿದರು.
ಹೊಸಪೇಟೆಯಲ್ಲಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಬೃಹತ್ ವಿರಾಟ್ ಯೋಗ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮಾತನಾಡಿ, ಹೊಸಪೇಟೆ ನಗರದಲ್ಲಿ ಪತಂಜಲಿ ಯೋಗ ಸಮಿತಿಯಲ್ಲಿ ಸದಸ್ಯರು ಒಹಳ ಕಡಿಮೆ ಪ್ರಮಾಣದಲ್ಲಿ ಇದ್ದರು. ಕ್ರಮೇಣ ಹೊಸಪೇಟೆ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪತಂಜಲಿ ಯೋಗ ಸಮಿತಿ ಸದಸ್ಯರಾಗಿ ಸೇರಿ ಪ್ರತಿ ದಿನ ಯೋಗ್ಯವಾದ ಆರೋಗ್ಯಕರವಾದ ಯೋಗ ಧ್ಯಾನ ಮಾಡಿ ತಮ್ಮ ಆರೋಗ್ಯವನ್ನು ಹೆಚ್ಚಿಸಿಕೊಂಡು ಬೇರೆಯವರ ಆರೋಗ್ಯದ ಕಡೆ ಗಮನವನ್ನು ನೀಡುತ್ತಿದ್ದಾರೆ ಎಂದು ಸಂತಸವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಯೋಗ ವಿಜಯ ಎಂಬ ನೆನಪಿನ ಸಂಪುಟ ಬಿಡುಗಡೆ ಮಾಡಲಾಯಿತು. ಮಹಿಳೆಯರಿಂದ ಸಿರಿಧಾನ್ಯದಿಂದ ರಂಗೋಲಿ ಮತ್ತು ಚಿತ್ತಾರಗಳನ್ನು ಹಾಕಿಸಲಾಗಿದ್ದು, ಇದು ಜನಮನ ಗಳಿಸಿತು.
ಮಾಹಿತಿ: ಮುರಳೀಧರ್ ನಾಡಿಗೇರ್, ಹೊಸಪೇಟೆ
Discussion about this post