ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸರ್, ನಿಮಗೆ ಈಗಲೇ ಇಷ್ಟು ಆಕ್ಟೀವ್ ಆಗಿ ಕೆಲಸ ಮಾಡಲು ಹೇಗೆ ಸಾಧ್ಯ? ನೀವು ಕೆಲಸ ಮಾಡುವ ಶೈಲಿಗೆ ಹ್ಯಾಟ್ಸಾಫ್…!
ಇದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಪ್ರಶ್ನಿಸಿ, ಪ್ರಶಂಸಿಸಿದ ಪರಿ.
ಮುಖ್ಯಮಂತ್ರಿಗಳನ್ನು ಭೇಟಿಯಾದ ವೇಳೆ ತಮ್ಮ ಕುತೂಹಲ ತಡೆಯದೇ ಈ ರೀತಿ ಪ್ರಶ್ನಿಸಿರುವ ಸುರೇಶ್ ಕುಮಾರ್ ಅವರು, ಯಡಿಯೂರಪ್ಪನವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಚಿವರ ವಿಶೇಷಾಧಿಕಾರಿಗಳು ಮಾಹಿತಿ ನೀಡಿದ್ದು, ಕಣ್ಣಾರೆ ಕಂಡ ಅವರ ಅಕ್ಷರಗಳಲ್ಲೇ ಓದಿ…
ಕರ್ನಾಟಕ ಸರ್ಕಾರವು ಕೋವಿಡ್ ಸವಾಲನ್ನು ಎದುರಿಸುತ್ತಿರುವ ರೀತಿ ಇಡೀ ರಾಷ್ಟ್ರದ ಗಮನ ಸೆಳೆದಿದೆ. ದೇಶಕ್ಕೆ ಕೊರೋನಾ ಸೋಂಕಿನಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಇಂದು ಹದಿಮೂರನೇ ಸ್ಥಾನಕ್ಕೇರಿದೆ. ಪರಿಹಾರ ಕಾರ್ಯಗಳು ರಭಸದಿಂದ ಸಾಗಿವೆ. ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲಾಗುತ್ತಿದೆ. ಆಡಳಿತ ಯಂತ್ರ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ.
ಇದಕ್ಕೆ ಪ್ರೇರಣಾಶಕ್ತಿಯಾಗಿ ರಾಜ್ಯದ ಮುಖ್ಯಮಂತ್ರಿಗಳು ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಮಹತ್ವದ ಸಭೆಗಳ ಅಧಿಕೇಂದ್ರವಾಗಿ ಪರಿವರ್ತನೆಯಾಗಿದೆ. ಜನ ಪ್ರತಿನಿಧಿಗಳು ಬಂದು ಸಲಹೆಗಳನ್ನು ನೀಡುತ್ತಿದ್ದಾರೆ. ಉದ್ಯಮಿಗಳು ಬಂದು ತಮ್ಮ ಯೋಜನೆಗಳನ್ನು ಮಂಡಿಸುತ್ತಿದ್ದಾರೆ. ಅಧಿಕಾರಿಗಳು ಸಭೆ ನಡೆಸಿ ಯೋಜನೆ ರೂಪಿಸಲು ನಿರ್ದೇಶನ ನಿರೀಕ್ಷಿಸುತ್ತಿದ್ದಾರೆ.
ಇಂತಹ ಕೇಳರಿಯದ ಸಾಮಾಜಿಕ ಸಂಕಷ್ಟದ ದಿನಗಳಲ್ಲಿ ಸಂಪನ್ಮೂಲಗಳ ಸದ್ಬಳಕೆಗೆ ನಿರ್ದೇಶನ ನೀಡುತ್ತಾ, ರಾಷ್ಟ್ರಕ್ಕೇ ಮೊದಲಾಗಿ ಎಲ್ಲ ದುರ್ಬಲ್ ವರ್ಗದವರ ಹಿತ ಕಾಯುವ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಚಾಲನೆ ನೀಡುತ್ತಾ, ಬಂದವರೆಲ್ಲರನ್ನೂ ಅಷ್ಟೇ ಸಹನೆಯಿಂದ ಆಲಿಸುತ್ತಾ ಮುಖ್ಯಮಂತ್ರಿಗಳು ಇಡೀ ಆಡಳಿತ ವ್ಯವಸ್ಥೆಯ ಸ್ಫೂರ್ತಿಸೆಲೆಯಾಗಿದ್ದಾರೆ. ವಯಸ್ಸನ್ನು ಲೆಕ್ಕಿಸದೇ ರಾಜ್ಯದ ಅಭಿವೃದ್ದಿಗೆ ಹೊಸ ದಿಶೆಯನ್ನು ಕಲ್ಪಿಸಿದ್ದಾರೆ.
ಹಲವಾರು ಸಭೆಗಳಲ್ಲಿ ಮುಖ್ಯಮಂತ್ರಿಗಳ ಜೊತೆಯಾಗಿರುವ ಅವರ ಸಂಪುಟ ಸಚಿವರಾದ ಸುರೇಶ್‌ಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕುತೂಹಲ ತಾಳದೇ ಪ್ರಶ್ನಿಸಿದದಾರೆ ’ಸಾರ್ ಹೇಗೆ ಸಾಧ್ಯ ಇದೆಲ್ಲಾ? ಎಂದಿದ್ದಾರೆ’ ಮುಖ್ಯಮಂತ್ರಿಗಳು ’ಇಲ್ಲ ಸುರೇಶ್ ಕುಮಾರ್. ಇದೊಂದು (ಕೊರೋನಾ) ಸವಾಲು. ಈ ಸವಾಲನ್ನು ಎದುರಿಸಲೇಬೇಕೆಂಬ ತೀರ್ಮಾನ ಮೊದಲ ದಿನದಿಂದ ನನ್ನದು. ರಾಜ್ಯದ ಜನತೆಯ ಒಟ್ಟು ಹಿತಕ್ಕಾಗಿ ಈ ಎಲ್ಲಾ ಸವಾಲು ಎದುರಿಸಲೇಬೇಕಲ್ಲವೇ?’
ಅವರ ಕ್ರಿಯಾಶೀಲತೆಗೆ ಬೆರಗಾಗಿರುವ ಸಚಿವ ಸರ್ಕಾರದ ಸದುದ್ದೇಶವನ್ನು ಯಾರೂ ಪ್ರಶ್ನಿಸದ ರೀತಿಯಲ್ಲಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿಗಳಿಗೆ ಹ್ಯಾಟ್ಸಾಫ್ ಎಂದಿದ್ದಾರೆ. ತಮ್ಮ ಫೇಸ್ ಬುಕ್ ತಾಣದಲ್ಲಿ ನೆನ್ನೆಯ ತಮ್ಮ ಅನುಭವವನ್ನು ದಾಖಲಿಸಿರುವ ಸಚಿವ ಸುರೇಶ್ ಕುಮಾರ್, ಯಡಿಯೂರಪ್ಪನವರ ನೇತೃತ್ವ, ಟ್ಟಟ್ಝಜ್ಚಿ ಕಾರ್ಯಶೈಲಿ ನಮ್ಮ ರಾಜ್ಯವನ್ನು ಬಹುತೇಕ ರಾಜ್ಯಗಳಿಗೆ ಹೋಲಿಸಿದರೆ ಸಮಾಧಾನಕರ ಸ್ಥಿತಿಯಲ್ಲಿಡುವಂತೆ ಮಾಡಿದೆ ಎಂದು ಅಭಿನಂದಿಸಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post