ಬೆಂಗಳೂರು: ಸಾಮಾನ್ಯವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಯನ್ನು ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿ ಆರಂಭಿಸಿದರೆ ಅವರಿಗೆ ಅದು ಹೆಮ್ಮೆ. ಅಂತಹುದ್ದೇ ಹೆಮ್ಮೆಯನ್ನು ಬೆಂಗಳೂರಿನ ಈ ಯುವಕ ಪಡೆದಿದ್ದಾನೆ. ಹೀಗೆ ಸಾಕಷ್ಟು ಯುವಕರು ಅವಕಾಶ ಪಡೆಯುತ್ತಾರೆ. ಆದರೆ, ಈ ಯುವಕನ ವಿಶೇಷ ಅವಕಾಶ ಏನು ಎಂದು ತಿಳಿಯಲು ಮುಂದೆ ಓದಿ…
ಮುಂಬೈ ಮೂಲದ, ಬೆಂಗಳೂರಿನಲ್ಲಿ ನೆಲೆಸಿರುವ 22 ವರ್ಷದ ಆದಿತ್ಯ ಪಲಿವಾಲ್‌ಗೆ ಸದ್ಯ ಗೂಗಲ್‌ನಲ್ಲಿ ಕೆಲಸ ದೊರಕಿದ್ದು, ಈತನ ಆರಂಭಿಕ ವೇತನ ವರ್ಷಕ್ಕೆ 1.2 ಕೋಟಿ ರೂ. ಅಂದರೆ, ತಿಂಗಳಿಗೆ ಬರೋಬ್ಬರಿ 10 ಲಕ್ಷ. ಈತ ಓದಿದ್ದು ಬೆಂಗಳೂರಿನ ಐಐಐಟಿಯಲ್ಲಿ.
ವಿಶ್ವದಾದ್ಯಂತ ಹಲವು ಭಾಗಗಳಿಂದ ಆಯ್ಕೆಯಾಗಿರುವ 50 ಯುವಕರಲ್ಲಿ ಆದಿತ್ಯ ಸಹ ಒಬ್ಬರಾಗಿದ್ದು, ಭಾರತದಿಂದ ಆಯ್ಕೆಯಾಗಿರುವ ಐವರಲ್ಲಿ ಒಬ್ಬರಾಗಿದ್ದಾರೆ.
ಇನ್ನು, ಆದಿತ್ಯ ಅವರ ಕುರಿತಾಗಿ ಅವರ ಉಪನ್ಯಾಸಕ ವಿ.ಎನ್. ಮುರಳೀಧರ್ ಮಾತನಾಡಿದ್ದು, ಆದಿತ್ಯ ಶ್ರಮವಹಿಸುವ ವಿದ್ಯಾರ್ಥಿಯಾಗಿದ್ದು, ಕೋಡಿಂಗ್‌ನಲ್ಲಿ ಅತ್ಯಂತ ನಿಪುಣನಾಗಿದ್ದಾನೆ. ಇಂತಹ ವಿದ್ಯಾರ್ಥಿಗಳು ದೇಶದಲ್ಲಿ ತೀರಾ ಕಡಿಮೆ ಎಂದಿದ್ದಾರೆ.
Discussion about this post