ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಇಡಿಯ ದೇಶದಲ್ಲೇ ಐತಿಹಾಸಿಕ ಹಾಗೂ ಧಾರ್ಮಿಕ ಭಾವನಾತ್ಮಕ ವಿಚಾರದಲ್ಲಿ ಅಂತಿಮ ತೀರ್ಪು ನೀಡುತ್ತಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೋಯ್ ಅವರು ಈಗ ದೇಶದ ಕೇಂದ್ರ ಬಿಂದುವಾಗಿದ್ದಾರೆ. ಅತ್ಯಂತ ಭಾವನಾತ್ಮಕ ವಿಚಾರವೊಂದರಲ್ಲಿ ತೀರ್ಪು ನೀಡುವ ಹೊಣೆಗಾರಿಕೆ ಹೊತ್ತ ಇಂತಹ ನ್ಯಾಯಾಧೀಶರ ಕುರಿತಾಗಿ ನಿಮಗೆಷ್ಟು ಗೊತ್ತು?
- 1954ರ ನವೆಂಬರ್ 18ರಂದು ಅಸ್ಸಾಂನ ದಿಬುರ್ ಗಢ್’ನಲ್ಲಿ ಜನನ
- ತಂದೆ ಕೇಶವ್ ಚಂದ್ರ ಗೋಗೋಯ್ ಕಾಂಗ್ರೆಸ್’ನ ಹಿರಿಯ ನಾಯಕ
- ದೆಹಲಿಯ ಸ್ಟೀಫನ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿ
- ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ
- 1978ರಲ್ಲಿ ಗುವಾಹಾಟಿ ಹೈಕೋರ್ಟ್‌ನಲ್ಲಿ ಅಭ್ಯಾಸ ಆರಂಭ
- 2001ರಲ್ಲಿ ಗುವಾಹಟಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ
- 2010ರಲ್ಲಿ ಪಂಜಾಬ್ ಮತ್ತು ಹರಿಯಾಣ ಕೋರ್ಟ್‌ಗೆ ವರ್ಗಾವಣೆ
- 2012 ಎಪ್ರಿಲ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆ
- 2018 ರ ಅಕ್ಟೋಬರ್ 3ರಂದು ದೀಪಕ್ ಮಿಶ್ರಾ ಅವರ ಉತ್ತರಾಧಿಕಾರಿಯಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆ
- 2019ರ ನವೆಂಬರ್ 17ರಂದು ರಂಜನ್ ಗೊಗೋಯ್ ನಿವೃತ್ತಿಯಾಗಲಿದ್ದಾರೆ
ಇವರು ನೀಡಿದ ಪ್ರಮುಖ ತೀರ್ಪಿನ ಪ್ರಕರಣಗಳು:
ಗೋವಿಂದ ಸ್ವಾಮಿ ವರ್ಸಸ್ ಕೇರಳ ರಾಜ್ಯ ಪ್ರಕರಣ
ಎನ್’ಆರ್’ಸಿ
ಅಮಿತಾಭ್ ಬಚ್ಚನ್ ಆದಾಯ ಪ್ರಕರಣ
Get In Touch With Us info@kalpa.news Whatsapp: 9481252093, 94487 22200
Discussion about this post