ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ 29 ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್’ನಲ್ಲಿ ನೈಋತ್ಯ ರೈಲ್ವೆ #SWR ಸೈಕ್ಲಿಸ್ಟ್’ಗಳು ಅತ್ಯುತ್ತಮ ಪ್ರದರ್ಶನ ನೀಡಿ, ಚಿನ್ನದ ಪದಕ ಗೆಲ್ಲುವ ಮೂಲಕ ಭರ್ಜರಿ ಸಾಧನೆ ಮಾಡಿದ್ದಾರೆ.
ಈ ಚಾಂಪಿಯನ್’ಶಿಪ್ ಡಿ.7-10ರವರೆಗೂ ಒಡಿಶಾದ ಪುರಿಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ದೇಶಾದ್ಯಂತದ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದರು.

Also read: ಮುರುಡೇಶ್ವರ | ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ 3 ವಿದ್ಯಾರ್ಥಿನಿಯರ ಶವ ಪತ್ತೆ
ವೈಯಕ್ತಿಕ ಸಾಧನೆಗಳ ಹೆಮ್ಮೆಯ ಸಿಬ್ಬಂದಿಗಳಿವರು:
- ಬಾಗಲಕೋಟೆಯಲ್ಲಿ #Bagalkote ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕಲೆಕ್ಟರ್ ಆಗಿರುವ ವೆಂಕಪ್ಪ ಕೆ. ಅವರು 60 ಕಿಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
- ಹುಬ್ಬಳ್ಳಿಯಲ್ಲಿ #Hubli ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿರುವ, ಕಾವೇರಿ ಮುರಾನಾಳ್ ಅವರು 60 ಕಿಮೀ ವೈಯಕ್ತಿಕ ರೋಡ್ ರೇಸ್ ಮತ್ತು 60 ಕಿಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
2023/24 ರ ಪಂದ್ಯಾವಳಿಯ ಅತ್ಯುತ್ತಮ ಸೈಕ್ಲಿಸ್ಟ್ ಪ್ರಶಸ್ತಿಯನ್ನು ನೀಡಲಾಯಿತು.
- ಹುಬ್ಬಳ್ಳಿಯಲ್ಲಿ ಕ್ಲರ್ಕ್ ಆಗಿರುವ, ಮೇಘಾ ಗುಗಾಡ್ ಅವರು, 30 ಕಿಮೀ ವೈಯಕ್ತಿಕ ಟೈಮ್ ಟ್ರಯಲ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಮತ್ತು 60 ಕಿಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
- ಚೈತ್ರಾ ಬೋಜಿರ್ -60 ಕಿಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಂಡದ ಯಶಸ್ಸಿಗೆ ಕೊಡುಗೆ ನೀಡಿದರು.

ತಮ್ಮ ಸಿಬ್ಬಂದಿಗಳು ಈ ಅಮೋಘ ಸಾಧನೆಯನ್ನು ಕೊಂಡಾಡಿರುವ ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ್ ಅವರು, ನಮ್ಮ ಆಟಗಾರರ ಅಸಾಧಾರಣ ಸಾಧನೆಗಳು ಅಭಿನಂದನಾರ್ಹ. ಕ್ರೀಡೆಯಲ್ಲಿ ಸಮರ್ಪಣೆ, ಬದ್ದತೆ ಹಾಗೂ ಕಾರ್ಯಕ್ಷಮತೆ ನೈಋತ್ಯ ರೈಲ್ವೆಗೆ ಮಾತ್ರವಲ್ಲದೇ ರಾಷ್ಟ್ರಕ್ಕೂ ಹೆಮ್ಮೆ ತಂದಿದೆ ಎಂದು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post