ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಅವಳಿ ನಗರದ ಪೊಲೀಸರಿಗೆ ಕೊರೋನಾ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಕೇವಲ ಒಂದೇ ವಾರದಲ್ಲಿ ಬಹುತೇಕ ಠಾಣೆಗಳ 150 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಅನ್ವಯ ಕಮೀಷನರೇಟ್ ವ್ಯಾಪ್ತಿಯಲ್ಲಿ 2,100 ಪೊಲೀಸ್ ಸಿಬ್ಬಂದಿಗಳಿದ್ದು, ಎಲ್ಲರಿಗೂ ಎರಡು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ. ಅಲ್ಲದೆ, ಪೊಲೀಸರು ಮುಂಚೂಣಿಯ ಹೋರಾಟಗಾರರಾಗಿರುವುದರಿಂದ ಅವರಿಗೆ ಮುನ್ನೆಚ್ಚರಿಕೆ ಲಸಿಕೆಯನ್ನೂ ಕೂಡ ನೀಡಲಾಗುತ್ತಿದೆ. ಸೋಂಕು ಪತ್ತೆಯಾದ 150 ಮಂದಿ ಸಿಬ್ಬಂದಿಗಳ ಪೈಕಿ ಹೆಚ್ಚಿನವರು ಲಕ್ಷಣ ರಹಿತರಾಗಿದ್ದಾರೆ. ಕೆಲವರಲ್ಲಿ ಮಾತ್ರ ಸೌಮ್ಯ ರೋಗ ಲಕ್ಷಣಗಳು ಕಂಡು ಬಂದಿದೆ. ಎಲ್ಲರೂ ಮನೆಯಲ್ಲೇ ಐಸೋಲೇಷನ್ನಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಸೋಂಕಿನಿಂದ ಎದುರಾಗುತ್ತಿರುವ ೩ನೇ ಅಲೆ ನಿಯಂತ್ರಿಸಲು ಜಿಲಾಡಳಿತ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿಗೆ ಸೋಂಕು ತಗುಲುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post