ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಸಾಮಾನ್ಯವಾಗಿ ಮಗಳಿಗೆ ತಂದೆಯೇ ಮೊದಲ ಹೀರೋ.. ಆದರೆ, ಇಲ್ಲೊಂದು ಘಟನೆಯಲ್ಲಿ ತಂದೆಯೇ ಮಗಳಿಗೆ ವಿಲನ್ ಆಗಿದ್ದಾನೆ…
ಹೌದು… ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ, ಮದುವೆಯಾಗುವ ನಿರ್ಧಾರ ಕೈಗೊಂಡ ಪರಿಣಾಮ ಕೋಪಗೊಂಡ ತಂದೆ ತನ್ನ 7 ತಿಂಗಳ ಗರ್ಭಿಣಿ ಮಗಳನ್ನೇ ಭೀಕರವಾಗಿ ಹತ್ಯೆ #father kills pregnant daughter ಮಾಡಿರುವ ಘಟನೆ ನಡೆದಿದೆ.
ಇನಾಂವೀರಾಪುರ ಗ್ರಾಮದ ಮಾನ್ಯಾ (19) ಹತ್ಯೆಯಾದ ಯುವತಿ. ಈಕೆ ಅದೇ ಗ್ರಾಮದ ವಿವೇಕಾನಂದ ಎಂಬವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಯುವಕ ಅನ್ಯಜಾತಿಯವನು ಎಂಬ ಕಾರಣಕ್ಕೆ ಆಕೆಯ ತಂದೆ ಪ್ರಕಾಶಗೌಡ ಮನೆಗೆ ನುಗ್ಗಿ, ಗರ್ಭಿಣಿ ಎಂಬುದನ್ನೂ ನೋಡದೇ ಪೈಪ್ ಮತ್ತು ಗುದ್ದಲಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಮತ್ತಿಬ್ಬರಿಗೂ ಗಂಭೀರ ಗಾಯಗಳಾಗಿವೆ.
ಮಾನ್ಯ ಹಾಗೂ ವಿವೇಕಾನಂದ ಇಬ್ಬರೂ ಕಾಲೇಜಿನಲ್ಲಿ ಓದುವ ವೇಳೆ ಸಾಮಾಜಿಕ ಜಾಲತಾಣದಿಂದ ಪ್ರೀತಿ ಹುಟ್ಟಿತ್ತು. ಆದರೆ, ಇಬ್ಬರ ಪ್ರೀತಿಗೆ ಕುಟುಂಬಸ್ಥರು ವಿರೋಧಿಸಿದ್ದರು. ನಂತರ ಕಳೆದ ಜೂನ್ 19ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು.
ಮದುವೆಯಾದ ನಂತರ ಇಬ್ಬರೂ ಹಾವೇರಿಯಲ್ಲಿ ವಾಸವಾಗಿದ್ದರು. ಈ ವೇಳೆ ಮಾನ್ಯ ಗರ್ಭಿಣಿಯಾಗಿದ್ದಾಳೆ. ಆದರೆ, ಕೋಪದಲ್ಲೇ ಇದ್ದ ಮಾನ್ಯಳ ತಂದೆ ಡಿ.21ರ ಸಂಜೆ ವಿವೇಕಾನಂದನ ಮನೆ ಮೇಲೆ ದಾಳಿ ಮಾಡಿದ ಪ್ರಕಾಶಗೌಡ ಪಾಟೀಲ್ ಮತ್ತು ಸಂಬಂಧಿಗಳು ಮನೆಯಲ್ಲಿದ್ದ ಆಕೆಯ ಅತ್ತೆ ಸೇರಿದಂತೆ ಮೂವರ ಮೇಲೆ ಪೈಪ್ ಮತ್ತು ಗುದ್ದಲಿಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಮಾನ್ಯಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ತನ್ನ ರಕ್ತದ ಕಣವನ್ನೇ ಕೊಲ್ಲುವಷ್ಟು ಕಠಿಣ ಮನಸ್ಸು ಮಾಡಿದ ತಂದೆ, ಅಂತಿಮವಾಗಿ ಆಕೆಯ ಪ್ರಾಣವನ್ನೇ ತೆಗೆದಿದ್ದಾನೆ ಪಾಪಿ ತಂದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















