ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು #Gas Cylinder Blast 10 ಅಯ್ಯಪ್ಪ ಮಾಲಾಧಾರಿಗಳು #Ayyappa Maladhari ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಅಚ್ಚವ್ವನ ಕಾಲೋನಿಯ ಈಶ್ವರ ದೇವಾಲಯದಲ್ಲಿ ನಡೆದಿದೆ.
ಗಾಯಗೊಂಡವರನ್ನು ಬಾಲಕ ವಿನಾಯಕ ಬಾತೇಕರ(12), ಸಂಜಯ ಸವದತ್ತಿ(20), ರಾಜು ಹರ್ಲಾಪುರ(21), ಮಂಜು ತೋರದ(22), ಪ್ರಕಾಶ ಬಾತಕೇರ(42), ಅಜ್ಜಸ್ವಾಮಿ(58), ತೇಜಸ್ ರೆಡ್ಡಿ(26), ಪ್ರವೀಣ ಛಲವಾದಿ(24), ಶಂಕರ ರಾಯನಗೌಡ್ರ(29) ಎಂದು ಗುರುತಿಸಲಾಗಿದೆ.
Also read: ಬೆಂಗಳೂರು | ಶ್ರೀನಿವಾಸನ ಸನ್ನಿಧಿಯಲ್ಲಿ ಅಹಿಕಾ ಗಾಯನ ಸೇವೆ ಸಂಪನ್ನ

ರಾತ್ರಿ ಮಲಗಿದ್ದಾಗ ಅಯ್ಯಪ್ಪ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್’ಗೆ ತಾಕಿ ಅದು ಉರುಳಿದೆ. ರೆಗ್ಯೂಲೇಟರ್ ಸಡಿಲಗೊಂಡು ಬಿಚ್ಚಿಕೊಂಡಿದ್ದು, ಹಚ್ಚಿದ ದೀಪ ತಾಕಿ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post