ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ #H D Kumaraswamy ಅವರನ್ನು ಮುಗಿಸುವ ಅನುಭವ ಕಾಂಗ್ರೆಸ್ ಗೇ ಹೆಚ್ಚಿದೆ ಬಿಜೆಪಿಗಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ #Pralhad Joshi ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಏನೇ ಹೇಳಲಿ; ಕುಮಾರಸ್ವಾಮಿ ಅವರು NDAದ ಒಂದು ಭಾಗವಾಗಿದ್ದಾರೆ. NDAದಲ್ಲಿ ಇರುವ ಯಾರನ್ನೂ ಬಿಜೆಪಿ ಮುಗಿಸುವ ಅಥವಾ ಕೈ ಬಿಡುವ ಮಾತೇ ಇಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷವನ್ನು ಮುಗಿಸಲು ಬಿಜೆಪಿಯೇ ಷಡ್ಯಂತ್ರ ಮಾಡಿದೆ ಎಂಬ ಕಾಂಗ್ರೆಸ್ ನಾಯಕರನ್ನು ಜೋಶಿ ತರಾಟೆಗೆ ತೆಗೆದುಕೊಂಡರು.
Also read: ಬಡವರ ಆರೋಗ್ಯದ ಸಲುವಾಗಿ ವಿಶೇಷ ಕೋರ್ಸ್‌ಗಳ ಅಗತ್ಯವಿದೆ: ಬಸವರಾಜ ಬೊಮ್ಮಾಯಿ
ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಕೆಳಗಿಳಿಸಿದವರು ಯಾರು? ಎಂದು ಪ್ರಶ್ನಿಸಿದ ಜೋಶಿ, ಕಾಂಗ್ರೆಸ್ ತನ್ನ ಅನುಭವದ ಮಾತುಗಳನ್ನು ಹೇಳುತ್ತಿದೆ ಅಷ್ಟೇ ಎಂದು ಟಾಂಗ್ ಕೊಟ್ಟರು.
ಸಿದ್ದರಾಮಯ್ಯ #Siddaramaiah ಮತ್ತು ಡಿ.ಕೆ. ಶಿವಕುಮಾರ್ #D K Shivakumar ಸೇರಿ ಶಾಸಕರ ರಾಜೀನಾಮೆ ಕೊಡಿಸಿ ಜೆಡಿಎಸ್ ಪಕ್ಷ ಮತ್ತು ಕುಮಾರಸ್ವಾಮಿ ಅವರನ್ನು ಮುಗಿಸಲು ಸಂಚು ರೂಪಿಸಿದ್ದು ನೆನಪಿಲ್ಲವೇ? ಎಂದು ಪ್ರಶ್ನಿಸಿದರು.
ತನಿಖೆ ನಡೆಸಲಿ ಮಾಜಿ ಸಿಎಂ ಕುಮಾರಸ್ವಾಮಿ ಅವಧಿಯಲ್ಲಿ ಹಗರಣಗಳು ನಡೆದಿದ್ದರೆ ತನಿಖೆ ನಡೆಸಲಿ. ಎಚ್ಡಿಕೆ ಅವರೂ ತನಿಖೆ ನಡೆಸಿ ಎಂದಿದ್ದಾರೆ. ತಮ್ಮದೇ ಸರ್ಕಾರವಿದೆ. ತನಿಖೆ ನಡೆಸಿ ಎಂದು ಸವಾಲು ಹಾಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post