ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ವಿಶ್ವದಲ್ಲೇ ಅತಿ ಉದ್ದದ ಪ್ಲಾಟ್’ಫಾರಂ ಹೊಂದಿರುವ ನೈರುತ್ಯ ರೈಲ್ವೆ ಇಲಾಖೆ ಈಗ ದೇಶದ ಅತಿ ಸ್ವಚ್ಛ ವಿಭಾಗದಲ್ಲೂ ಸಹ ಮೊದಲ ಸ್ಥಾನ ಪಡೆದುಕೊಳ್ಳುವ ಮೂಲಕ ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಗಾಂಧಿ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರೈಲ್ವೆ ಇಲಾಖೆ ನಡೆಸುವ ಸ್ವಚ್ಛತಾ ಪಾಕ್ಷಿಕ 2023 ರಲ್ಲಿ ನೈಋತ್ಯ ರೈಲ್ವೆ ಮೊದಲ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷವೂ ನೈಋತ್ಯ ರೈಲ್ವೆ ವಲಯ ಮೊದಲ ಸ್ಥಾನ ಪಡೆದುಕೊಂಡಿತ್ತು ಎನ್ನುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಈಗ ಸತತ ಎರಡನೇ ಬಾರಿಗೆ ಆಯ್ಕೆಯಾಗಿ ದಾಖಲೆ ಸೃಷ್ಟಿ ಮಾಡಿದೆ.
Also read: ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್ ಉದ್ದಟತನವನ್ನು ಸಮರ್ಥಿಸಿಕೊಂಡ ನಟ ಚೇತನ್ ಅಹಿಂಸಾ
ಇನ್ನೂ ಈಶ್ಯಾನ ಹಾಗೂ ದಕ್ಷಿಣ ಸೆಂಟ್ರಲ್ ರೈಲ್ವೆ ಎರಡು ಹಾಗೂ ಮೂರನೆಯ ಸ್ಥಾನ ಗಳಿಸಿವೆ.
ನೈರುತ್ಯ ರೈಲ್ವೆ ಇಲಾಖೆ ರೈಲ್ವೆ ಸಂಪರ್ಕದಲ್ಲಿ ತನ್ನ ವಿಭಿನ್ನತೆಯಿಂದ ಅತ್ಯುತ್ತಮ ಸೇವೆ ನೀಡುವುದಕ್ಕೆ ಹೆಸರುವಾಸಿಯಾಗಿದೆ. ದೇಶದ ಇತರೇ ವಿಭಾಗಗಳ ಪೈಕಿ ಜನರಿಗೆ ವಿಶೇಷ ಅನುಭೂತಿ ನೀಡುವಲ್ಲಿ ನೈರುತ್ಯ ಇಲಾಖೆ ಸದಾ ಮುಂಚೂಣಿಯಲ್ಲಿರುತ್ತದೆ. ಇಂತಹ ವಿಭಾಗಕ್ಕೆ ಮತ್ತೊಂದು ಗರಿ ಲಭ್ಯವಾಗಿದೆ.
ದಿನನಿತ್ಯದ ವರದಿಗಳ ಮೌಲ್ಯಮಾಪನದ ಆಧಾರದ ಮೇಲೆ ನೈಋತ್ಯ ರೈಲ್ವೆಯು ಎಲ್ಲಾ ವಲಯ ರೈಲ್ವೆಗಳಲ್ಲಿ ಅತ್ಯುತ್ತಮವೆಂದು ಗುರುತಿಸಲ್ಪಟ್ಟಿದೆ.
ಮಾನದಂಡವೇನು?
ರೈಲ್ವೆ ಇಲಾಖೆಯ ರೈಲ್ವೆ ನಿಲ್ದಾಣ ಹಾಗೂ ಕಚೇರಿಗಳ ಸ್ವಚ್ಛತೆ
ರೈಲ್ವೆ ಹಳಿಗಳ ಮೇಲಿನ ನಿರಂತರ ಸ್ವಚ್ಛತೆ
ರೈಲ್ವೆ ಸಿಬ್ಬಂದಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು
ಪ್ರಯಾಣಿಕರಿಗೆ ಅನುಕೂಲಕರ ರೀತಿಯ ಸ್ವಚ್ಛತೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















