ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿ ವಿಭಾಗ ಮತ್ತು ಪ್ರಧಾನ ಕಚೇರಿಯ ಸಿಬ್ಬಂದಿಯನ್ನು ಒಳಗೊಂಡ ಒಟ್ಟು 12 ಇಲಾಖಾ ಆಯ್ಕೆ ಪರೀಕ್ಷೆಗಳನ್ನು ಮಾರ್ಚ್ 17 ಮತ್ತು 18, 2026 ರಂದು ಹುಬ್ಬಳ್ಳಿಯ ಆರ್ಆರ್ಸಿ (RRC) ನಲ್ಲಿ ನಡೆಸಲು ಯೋಜಿಸಲಾಗಿತ್ತು.
ಆದರೆ, ಮಾರ್ಚ್ 17, 2026 ರಂದು ಬೆಳಿಗ್ಗೆ ಸುಮಾರು 08:30 ಘಂಟೆಗೆ ಕನ್ನಡ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಳಗ) ಸದಸ್ಯರು ಹುಬ್ಬಳ್ಳಿಯ ರೈಲ್ವೆ ನೇಮಕಾತಿ ಕೋಶ (RRC) ಕಚೇರಿಯ ಪ್ರವೇಶದ್ವಾರದಲ್ಲಿ ಪ್ರತಿಭಟನೆ ನಡೆಸಿ, ಅಭ್ಯರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿ ಪ್ರವೇಶಿಸಲು ಅಡ್ಡಿಪಡಿಸಿದರು. ಇಲಾಖಾ ಬಡ್ತಿ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸಬೇಕು ಎಂದು ಆಗ್ರಹಿಸಿದರು.

ಇಲಾಖಾ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಸೇರಿಸುವ ವಿಷಯವನ್ನು ಸೂಕ್ತ ಮಟ್ಟದಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಮತ್ತು ಅದರ ಕುರಿತು ಅಂತಿಮ ನಿರ್ಧಾರವನ್ನು ಬಳಿಕ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
Also read: ಯುಗಾದಿ ಹಬ್ಬ ಹಿನ್ನೆಲೆ: ಯಶವಂತಪುರ ಮತ್ತು ಹೊಸಪೇಟೆ ನಡುವೆ ವಿಶೇಷ ರೈಲು ಸೇವೆ
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಹುಬ್ಬಳ್ಳಿ ವಿಭಾಗ ಮತ್ತು ಪ್ರಧಾನ ಕಚೇರಿಯ ಸಿಬ್ಬಂದಿಯ ಮಾರ್ಚ್ 17 ಮತ್ತು 18, 2026 ರಂದು ನಿಗದಿಯಾಗಿದ್ದ ಕಂಪ್ಯೂಟರ್ ಆಧಾರಿತ (CBT) ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಮುಂದೂಡಲ್ಪಟ್ಟ ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಂತರ ತಿಳಿಸಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















