ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ವಿಭಾಗೀಯ ರೈಲ್ವೆ #Divisional Railway ವತಿಯಿಂದ ರೈಲ್ವೆ ಆಫೀಸರ್ ಕ್ಲಬ್’ನಲ್ಲಿ #Railway Officer Club ಆಯೋಜಿಸಲಾಗಿದ್ದ ಅಖಿಲ ಭಾರತ ಪಿಂಚಣಿ ಅದಾಲತ್-2024ರಲ್ಲಿ 13 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ.
ಮುಖ್ಯ ಕಾರ್ಮಿಕ ಅಧಿಕಾರಿ ಕೆ. ಆಸೀಫ್ ಹಫೀಜ್ ಮಾತನಾಡಿ, ರೈಲ್ವೆ ಇಲಾಖೆಯ ಉನ್ನತಿಕರಣದಲ್ಲಿ ನಿವೃತ್ತ ನೌಕರರ ಶ್ರಮ ಅಧಿಕವಾಗಿದೆ. ಇಲಾಖೆಯು ನಿವೃತ್ತ ನೌಕರರ ಹಿತ ಕಾಯುತ್ತದೆ. ಪ್ರತಿ ಪಿಂಚಣಿದಾರರ ಸಮಸ್ಯೆ ಪರಿಹರಿಸಲು ಇಂದು ರೈಲ್ವೆ ಇಲಾಖೆ ದೇಶದಲ್ಲಿ ರಾಷ್ಟ್ರೀಯ ಪಿಂಚಣಿ ಅದಾಲತ್ #National Pension Adalat ಆಯೋಜನೆ ಮಾಡಲಾಗಿದ್ದು, ಇಲ್ಲಿ ನಿವೃತ್ತರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ಅವರ ಹಿತ ಕಾಯಲಾಗುತ್ತದೆ ಎಂದರು.

Also read: ದಕ್ಷಿಣ ರೈಲ್ವೆ | ಪ್ಯಾಸೆಂಜರ್ ರೈಲುಗಳಿಗೆ ಮರು ಸಂಖ್ಯೆಗಳು ಹೀಗಿವೆ ನೋಡಿ
ಕೌಟುಂಬಿಕ ಪೆನ್ಷನ್ ಪಡೆಯುವಲ್ಲಿ ಆ ಪಿಂಚಣಿದಾರರ ಕುಟುಂಬದಲ್ಲಿ ಕೆಲವೊಂದು ಸಮಸ್ಯೆ ಇರುವುದರಿಂದ ಆಗ ಪಿಂಚಣಿ ಪಡೆಯುವಲ್ಲಿ ಅಡೆತಡೆ ಆಗುವುದು, ಸೂಕ್ತ ದಾಖಲೆ ನೀಡಿದರೆ ಇದನ್ನು ಶೀಘ್ರದಲ್ಲಿ ಪರಿಹಾರ ಮಾಡಲಾಗುತ್ತದೆ ಎಂದರು.

ನಿವೃತ್ತ ರೈಲ್ವೆ ನೌಕರರ ಸಂಘದ ಕಾರ್ಯದರ್ಶಿ ಎಸ್.ಎಸ್. ಬಳ್ಳಾರಿ ಮಾತನಾಡಿ, ಕೌಂಟುಬಿಕ ಪಿಂಚಣಿ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದ್ದರು.
ಈ ಅದಾಲತ್’ನಲ್ಲಿ ಸಹಾಯಕ ಕಾರ್ಮಿಕ ಅಧಿಕಾರ ತಿರುಮಲ ರೆಡ್ಡಿ ಭಾಗವಹಿಸಿದ್ದರು. ಅದಾಲತ್ ನಲ್ಲಿ ಒಟ್ಟು 13 ಪ್ರಕರಣಗಳನ್ನು ಪರಿಹಾರ ಮಾಡಲಾಗಿದ್ದು, ಹೊಸದಾಗಿ 03 ಪ್ರಕರಣಗಳನ್ನು ದಾಖಲಾತಿ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post