ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಕರ್ತವ್ಯಪರತೆ ತೋರಿದ ಐವರು ಉದ್ಯೋಗಿಗಳಿಗೆ ಸುರಕ್ಷತಾ ಪ್ರಶಸ್ತಿಯನ್ನು #Safefy Award ನೀಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ವಲಯದ #Southwestern Railway Zone ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾರ್ಥು ಅವರು ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲು ಸೌಧದ ಜಿಎಂ ಕಾನ್ಫರೆನ್ಸ್ ಹಾಲ್’ನಲ್ಲಿ ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಇಂದು ಸುರP್ಷÀತಾ ಸಭೆ ನಡೆಸಿದರು. ಈ ಸಭೆಯ ನಂತರ ಪ್ರಶಸ್ತಿ ಪ್ರದಾನ ಮಾಡಲಾಯಿತು.

Also read: 100 ಹಿಂದೂ ಕುಟುಂಬಗಳ ನಡುವೆ ಒಂದು ಮುಸ್ಲಿಂ ಕುಟುಂಬ | ಯೋಗಿ ಆದಿತ್ಯನಾಥ್ ಹೇಳಿದ್ದೇನು?
ಹುಬ್ಬಳ್ಳಿ ವಿಭಾಗದ ಶಿವಾಜಿ ಎಲ್. ಪವಾರ್, ಬೆಂಗಳೂರು ವಿಭಾಗದ ಕೈಲಾಶ್ ಪ್ರಸಾದ್ ಮೀನಾ ಮತ್ತು ಎಚ್.ಎಸ್. ಮಹೇಶ್ ಹಾಗೂ ಮೈಸೂರು ವಿಭಾಗದ ಜೆ.ಬಿ. ಲೋಹಿತ್ ಮತ್ತು ಅಬು ಸಾಲಿಯಾ ಅವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post