ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ದಕ್ಷಿಣ ರೈಲ್ವೆಯಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳಿಂದಾಗಿ, ರೈಲು ಸಂಖ್ಯೆ 07355/07356 ಹುಬ್ಬಳ್ಳಿ – ರಾಮೇಶ್ವರಂ – ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲಿನ ಸಂಚಾರದ ಅವಧಿಯನ್ನು ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಈ ರೈಲು ರಾಮೇಶ್ವರಂ ಬದಲು ರಾಮನಾಥಪುರಂವರೆಗಷ್ಟೇ ಸಂಚರಿಸಲಿದೆ. ಈ ರೈಲು ಈಗಿರುವ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ಚಲಿಸುವುದನ್ನು ಮುಂದುವರಿಸುತ್ತದೆ.
ಈ ಹಿಂದೆ ಆಗಸ್ಟ್ 30, 2025 ರವರೆಗೆ ಓಡಲು ಸೂಚಿಸಲಾಗಿದ್ದ ರೈಲು ಸಂಖ್ಯೆ 07355 ಹುಬ್ಬಳ್ಳಿ – ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್’ ಪ್ರೆಸ್ ರೈಲು ಈಗ ಸೆಪ್ಟೆಂಬರ್ 27, 2025 ರವರೆಗೆ ನಾಲ್ಕು ಟ್ರಿಪ್’ಗಳಿಗೆ ವಿಸ್ತರಿಸಲಾಗಿದೆ, ಆದರೆ, ಈ ರೈಲು ರಾಮೇಶ್ವರಂ ಬದಲು ರಾಮನಾಥಪುರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.ಅದೇ ರೀತಿ, ಆಗಸ್ಟ್ 31, 2025 ರವರೆಗೆ ಸಂಚರಿಸಲು ಸೂಚಿಸಲಾಗಿದ್ದ, ರೈಲು ಸಂಖ್ಯೆ 07356 ರಾಮೇಶ್ವರಂ – ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಈಗ ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 28, 2025 ರವರೆಗೆ ನಾಲ್ಕು ಟ್ರಿಪ್’ಗಳಿಗೆ ಚಲಿಸಲಿದೆ, ಇದು ರಾಮೇಶ್ವರದ ಬದಲಿಗೆ ರಾಮನಾಥಪುರಂನಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ಶಿವಮೊಗ್ಗದವರಿಗೂ ಅನುಕೂಲ
ಸಂಚಾರ ಅವಧಿ ವಿಸ್ತರಣೆಯಾಗಿರುವ ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂ ರೈಲು ಹುಬ್ಬಳ್ಳಿಯಿಂದ ಹೊರಟು, ದಾವಣಗೆರೆ, ಬೀರೂರು, ಯಶವಂತಪುರ, ಸೇಲಂ, ತಿರುಚನಾಪಲ್ಲಿ ಮಾರ್ಗವಾಗಿ ರಾಮನಾಥಂಪುರಂ ತಲುಪಲಿದೆ.
ಹೀಗಾಗಿ, ಶಿವಮೊಗ್ಗ ಭಾಗದಿಂದ ರಾಮೇಶ್ವರಂ, ರಾಮನಾಥಪುರಂ ತೆರಳುವ ಪ್ರಯಾಣಿಕರು ಬೀರೂರು ನಿಲ್ದಾಣದಿಂದ ರೈಲು ಹತ್ತಬಹುದಾಗಿದೆ.
ಪ್ರಯಾಣಿಕರು IRCTC ಹಾಗೂ RailOne ಮೂಲಕ ಅಥವಾ ನಿಮ್ಮೂರಿನ ರೈಲು ನಿಲ್ದಾಣಗಳ ಕಾಯ್ದಿರಿಸುವ ಕೌಂಟರ್’ಗಳಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಮಾಹಿತಿಗಾಗಿ 139 ಸಂಖ್ಯೆಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post