ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ/ಶಿವಮೊಗ್ಗ |
ರಾಜ್ಯದ ಮೂರು ಕಡೆಗಳಿಗೆ ಹೊಸ ರೈಲು ಮಾರ್ಗ #New railway line ಘೋಷಣೆ ಮಾಡಿರುವ ಕೇಂದ್ರ ಸರ್ಕಾರ ಇದರಲ್ಲಿ ಶಿವಮೊಗ್ಗ ಜಿಲ್ಲೆಗೂ ಸಹ ಬಂಪರ್ ನೀಡಿದೆ.
ಈ ಕುರಿತಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ #V Somanna ಅವರು ಮಾತನಾಡಿದ್ದು, ರಾಜ್ಯದ ಮೂರು ಕಡೆಗಳಿಗೆ ನೂತನ ರೈಲು ಮಾರ್ಗ ನಿರ್ಮಾಣ ಮಾಡಲಾಗುವುದು. ಇದರಲ್ಲಿ ತಾಳಗುಪ್ಪ- ಶಿರಸಿ- ಹುಬ್ಬಳ್ಳಿ, ಅಂಕೋಲಾ- ಹುಬ್ಬಳ್ಳಿ ಮತ್ತು ತಾಳಗುಪ್ಪ- ಹೊನ್ನಾವರ ಮಾರ್ಗಗಳು ಈ ಯೋಜನೆಯಲ್ಲಿ ಸೇರಿವೆ ಎಂದಿದ್ದಾರೆ.
ರಾಜ್ಯದಲ್ಲಿ 3 ಹೊಸ ರೈಲು ಮಾರ್ಗಗಳ ಆರಂಭಕ್ಕಾಗಿ ನಡೆಸಲಾಗುತ್ತಿದ್ದ ಸಮೀಕ್ಷೆಗಳು ಇದೀಗ ಅಂತಿಮ ಹಂತ ತಲುಪಿವೆ ಎಂದಿದ್ದಾರೆ.
ನೂತನ ರೈಲು ಮಾರ್ಗಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಸ್ವಾಧೀನದ ಸಮೀಕ್ಷೆಗಳು ಸಹ ಕೊನೆಯ ಹಂತದಲ್ಲಿ. ತಾಳಗುಪ್ಪ- ಶಿರಸಿ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ಸಂಬAಧಿಸಿದAತೆ, ವಿಸ್ತÈತ ಯೋಜನಾ ವರದಿ (ಡಿಪಿಆರ್) ಮುಂದಿನ 6 ತಿಂಗಳೊಗಾಗಿ ಸಿದ್ಧವಾಗುತ್ತದೆ. ವರದಿ ಸಿದ್ಧವಾದ ಕೂಡಲೇ ಭೂ ಸ್ವಾಧೀನ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಯೋಜನೆಯ ಸಮೀಕ್ಷೆ ಕಾರ್ಯ ಈಗಾಗಲೇ ಮುಕ್ತಾಯಗೊಂಡಿದ್ದು, ಕಾಮಗಾರಿಗೆ ಸುಮಾರು 3000 ಕೋಟಿ ರೂಪಾಯಿ ಅಂದಾಜು ವೆಚ್ಚದ ಸಾಧ್ಯತೆಯಿದೆ. ಈ ಮಹತ್ವದ ರೈಲು ಮಾರ್ಗ ಯೋಜನೆಯು 2030 ರೊಳಗೆ ಪೂರ್ಣಗೊಂಡು ಕಾರ್ಯಗತಗೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಹೊಸ ರೈಲು ಮಾರ್ಗದ ಯೋಜನೆಯು ಸ್ಥಳೀಯ ಪ್ರವಾಸೋದ್ಯಮ, ವಾಣಿಜ್ಯ ಮತ್ತು ವ್ಯಾಪಾರ ವಹಿವಾಟು ಹಾಗೂ ಒಟ್ಟಾರೆ ಆರ್ಥಿಕತೆ ಬಲ ವೃದ್ಧಿಗೆ ಉತ್ತೇಜನ ನೀಡುವಂತದ್ದಾಗಿದೆ. ಇದರೊಟ್ಟಿಗೆ, ಕರ್ನಾಟಕ ರಾಜ್ಯಕ್ಕೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯನ್ನು ಆರಂಭಿಸುವ ಕುರಿತು ಸಹ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















