ಬೆಂಗಳೂರು: ಇಂದಿನ ಫಲಿತಾಂಶದಲ್ಲಿ ಗೆಲವು ದಾಖಲಿಸುವ ಮೂಲಕ ದೇಶದ ಶಾಸನ ರಚನೆಯಲ್ಲಿ ನಾನೂ ಸಹ ಕೊಡುಗೆ ನೀಡುತ್ತೇನೆ ಎಂಬ ಭರವಸೆ ನನಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇಂದು ಚುನಾವಣಾ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ನಾನು ಗೆಲುವು ದಾಖಲಿಸುತ್ತೇನೆ ಎಂಬ ನಂಬಿಕೆಯಿದೆ. ಈ ಮೂಲಕ ದೇಶದ ಶಾಸನ-ನೀತಿ ರಚನೆ ಹಾಗೂ ನಿರೂಪಣೆಯಲ್ಲಿ ನಾನೂ ಸಹ ಕೊಡುಗೆ ನೀಡುತ್ತೇನೆ ಎಂಬ ನಂಬಿಕೆ ನನಗಿದೆ ಎಂದು ತಮ್ಮ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ.
Discussion about this post