ನವದೆಹಲಿ: ರಾಫೆಲ್ ಯುದ್ದವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪದೇ ಪದೇ ಆರೋಪ ಮಾಡುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಡಸ್ಸಾಲ್ಟ್ ಕಂಪೆನಿ ಸಿಇಒ ನೀಡಿರುವ ಹೇಳಿಕೆ ರಾಹುಲ್ ಅವರ ಮರ್ಯಾದೆಯನ್ನು ಹರಾಜು ಹಾಕಿದೆ.
ರಾಫೆಲ್ ಯುದ್ದ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಸಿಇಒ ಎರಿಕ್ ಟ್ರ್ಯಾಪಿಯರ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದು, ರಾಫೆಲ್ ಒಪ್ಪಂದಕ್ಕಾಗಿ ಮುಖೇಶ್ ಅಂಬಾನಿ ಅವರ ರಿಲಾಯನ್ಸ್ ಕಂಪೆನಿಯನ್ನು ನಾವೇ ಆಯ್ಕೆ ಮಾಡಿದ್ದೇವೆಯೇ ವಿನಾ, ಯಾರದ್ದೂ ಹಸ್ತಕ್ಷೇಪವಿಲ್ಲ. ಇದರಲ್ಲಿ ಪ್ರಮುಖವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮಾಡುತ್ತಿರುವ ಆರೋಪ ಸಂಪೂರ್ಣ ಸುಳ್ಳು ಎಂದಿದ್ದಾರೆ.
“I DON’T LIE,” DASSAULT CEO ERIC TRAPPIER RESPONDS TO RAHUL GANDHI
READ @ANI EXCLUSIVE INTERVIEW BY @smitaprakash | https://t.co/1iVNegk2kE pic.twitter.com/LVfROO2XgD
— ANI Digital (@ani_digital) November 13, 2018
ವಿಚಾರದಲ್ಲಿ ರಾಹುಲ್ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಅವರು, ರಾಹುಲ್ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಡೀಲ್ ಬಗ್ಗೆ ನಾನು ಈ ಹಿಂದೆ ಮಾಡಿದ್ದ ಘೋಷಣೆಗಳು, ನೀಡಿದ್ದ ಹೇಳಿಕೆಗಳು ಸತ್ಯ. ಸುಳ್ಳು ಹೇಳುವ ಅಗತ್ಯತೆ ನನಗಂತೂ ಇಲ್ಲ. ನನ್ನ ಸಿಇಒ ಹುದ್ದೆಯಲ್ಲಿ ನೀವಿದ್ದರೆ ನೀವೂ ಸುಳ್ಳು ಹೇಳಲು ಸಾಧ್ಯವಿಲ್ಲ ಎಂದರು.
ಈ ಡೀಲಿನಲ್ಲಿ ಹೂಡಿರುವ ಹಣವು ರಿಲಯನ್ಸ್ ಕಂಪೆನಿಗೆ ನೇರವಾಗಿ ಹೋಗುವುದಿಲ್ಲ. ಇದೊಂದು ಜಂಟಿ ಉದ್ಯಮವಾಗಿದೆ. ಒಪ್ಪಂದದ ಅನ್ವಯ ಈ ಕಾರ್ಯಕ್ಕಾಗಿ ರಿಲಯನ್ಸ್ ನಂತೆಯೇ ಇನ್ನೂ 30 ಸಂಸ್ಥೆಗಳು ಕೈಜೋಡಿಸಿವೆ ಎಂದು ಸ್ಪಷ್ಟಪಡಿಸುವ ಮೂಲಕ ರಾಹುಲ್ ಆರೋಪಗಳು ಸುಳ್ಳು ಎಂಬುದನ್ನು ಸಾರಿ ಸಾರಿ ಹೇಳಿದರು.
ತಮ್ಮ ವಿರುದ್ಧ ಹಾಗೂ ತಮ್ಮ ಕಂಪನಿ ವಿರುದ್ಧ ಎಐಸಿಸಿ ಮಾಡಿರುವ ಆರೋಪದಿಂದ ಬಹಳಷ್ಟು ನೋವಾಗಿದೆ. ನಮಗೆ ಕಾಂಗ್ರೆಸ್ ನೊಂದಿಗೆ ದೀರ್ಘವಾಗಿ ವ್ಯವಹರಿಸಿದ ಅನುಭವವಿದೆ. ನಾವು ಭಾರತದಲ್ಲಿ ಕೆಲಸ ಮಾಡುತ್ತಿದ್ದೇವೇಯೇ ವಿನಾ ಯಾವುದೇ ಪಕ್ಷಕ್ಕಾಗಿ ಕೆಲಸ ಮಾಡುತ್ತಿಲ್ಲ. ಎಂದವರು ಕಿಡಿ ಕಾರಿದರು.







Discussion about this post